15 ತಿಂಗಳ ಬಳಿಕ ಫೆಲೆಸ್ತೀನ್ ವಿದ್ಯಾರ್ಥಿನಿ ಬಿಡುಗಡೆ

Update: 2020-12-01 18:41 GMT

ರಮಲ್ಲಾ (ಫೆಲೆಸ್ತೀನ್), ಡಿ. 1: ಹದಿನೈದು ತಿಂಗಳ ಹಿಂದೆ ಬಂಧಿಸಿದ್ದ 22 ವರ್ಷದ ಫೆಲೆಸ್ತೀನ್ ವಿದ್ಯಾರ್ಥಿನಿಯೊಬ್ಬರನ್ನು ಇಸ್ರೇಲ್ ಪಡೆಗಳು ಸೋಮವಾರ ಬಿಡುಗಡೆ ಮಾಡಿವೆ.

ಬಿರ್ಝೀಟ್ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿರುವ ಮಾಯ್ಸಾ ಅಬು ಘೋಷ್‌ರನ್ನು 2019 ರ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಡೆಮಾಕ್ರಟಿಕ್ ಪ್ರೊಗ್ರೆಸಿವ್ ಸ್ಟೂಡೆಂಟ್ ಪೋಲ್‌ನ ಸದಸ್ಯೆಯಾಗಿರುವ ಆಕೆ, ಇಸ್ರೇಲ್ ಆಕ್ರಮಣದ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಹುಟ್ಟಿಸುತ್ತಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗಿತ್ತು. ಈ ವಿದ್ಯಾರ್ಥಿ ಸಂಘಟನೆಯನ್ನು ಇಸ್ರೇಲ್ ಸೇನೆ ನಿಷೇಧಿಸಿದೆ.

ಮಾಯ್ಸ ಅಬು ಘೋಷ್‌ಗೆ 2,000 ಶೇಕಲ್ಸ್ (ಸುಮಾರು 44,000 ರೂಪಾಯಿ) ದಂಡ ವಿಧಿಸಲಾಗಿದೆ. ಬಳಿಕ ಅವರನ್ನು ಡಮೋನ್ ಜೈಲಿನಿಂದ ಜಲಾಮೇ ಗಡಿಠಾಣೆಯಲ್ಲಿ ಬಿಡುಗಡೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News