ಶಿವಮೊಗ್ಗ ಗಲಭೆ ಪ್ರಕರಣ: ಹತ್ತು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ

Update: 2020-12-05 05:19 GMT

ಶಿವಮೊಗ್ಗ, ಡಿ.5: ಮೊನ್ನೆ ನಡೆದ ಗಲಭೆ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮುಂದುವರಿದಿದೆ. ಈ ನಡುವೆ ವಾರ್ಡುವಾರು ಹತ್ತು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನೇಮಿಸಿ ಒಳಾಡಳಿತ ಇಲಾಖೆ ಸರಕಾರದ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. 

ಯಾವೆಲ್ಲ ವಾರ್ಡ್ ಗೆ ಯಾರು ದಂಡಾಧಿಕಾರಿ?

1. ಕುಮಾರ್, ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ : ವಾರ್ಡ್ 1. ಸಹ್ಯಾದ್ರಿ ನಗರ, ವಾರ್ಡ್ 2. ಅಶ್ವಥ್ ನಗರ, ವಾರ್ಡ್ 3. ಶಾಂತಿನಗರ

2. ಷಡಕ್ಷರಿ, ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ : ವಾರ್ಡ್ 4 ಮಲ್ಲೇಶ್ವರ ನಗರ, ವಾರ್ಡ್ 10 ರವೀಂದ್ರನಗರ, ವಾರ್ಡ್ 11 ಬಸವನಗುಡಿ, ವಾರ್ಡ್ 12 ಟ್ಯಾಂಕ್ ಮೊಹಲ್ಲಾ

3. ಕಿರಣ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ : ವಾರ್ಡ್ 13 ಅರಮನೆ ಪ್ರದೇಶ, ವಾರ್ಡ್ 22 ಗಾಂಧಿ ಬಜಾರ್ ಪಶ್ಚಿಮ, ವಾರ್ಡ್ 23 ಗಾಂಧಿ ಬಜಾರ್ ಪೂರ್ವ

4. ಗಣೇಶ್, ಜಂಟಿ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ : ವಾರ್ಡ್ 5 ಗುಡ್ಡೆಕಲ್ಲು, ವಾರ್ಡ್ 14 ವಿದ್ಯಾನಗರ, ವಾರ್ಡ್ 15 ಹರಿಗೆ, ವಾರ್ಡ್ 16 ಮಲವಗೊಪ್ಪ

5. ರಾಮಚಂದ್ರ ಮಡಿವಾಳ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ : ವಾರ್ಡ್ 33 ಸವಾಯಿಪಾಳ್ಯ, ವಾರ್ಡ್ 34 ವಿದ್ಯಾನಗರ, ವಾರ್ಡ್ 35 ಸೂಳೇಬೈಲು

6. ಮೂಕಪ್ಪ ಕರಿಭೀಮಣ್ಣಮನವರ್, ಆಯುಕ್ತರು, ಸೂಡಾ : ವಾರ್ಡ್ 27 ಮಿಳಘಟ್ಟ, ವಾರ್ಡ್ 28 ಆರ್.ಎಂ.ಎಲ್.ನಗರ, ವಾರ್ಡ್ 29 ಆಜಾದ್ ನಗರ, ವಾರ್ಡ್ 30 ಸೀಗೆಹಟ್ಟಿ

7. ನಾಗರಾಜ್ ಕೆ., ಉಪ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ : ವಾರ್ಡ್ 24 ಕೆ.ಹೆಚ್.ಬಿ.ಗೋಪಾಳ, ವಾರ್ಡ್ 25 ಜೆ.ಪಿ.ನಗರ, ವಾರ್ಡ್ 31 ಗೋಪಿಶೆಟ್ಟಿಕೊಪ್ಪ, ವಾರ್ಡ್ 32 ಟಿಪ್ಪುನಗರ

8. ಸದಾಶಿವಪ್ಪ, ಉಪ ನಿರ್ದೇಶಕ, ಪಶುಸಂಗೋಪನ ಇಲಾಖೆ : ವಾರ್ಡ್ 17 ಗೋಪಾಲಗೌಡ ಬಡಾವಣೆ, ವಾರ್ಡ್ 6 ಗಾಡಿಕೊಪ್ಪ, ವಾರ್ಡ್ 7 ಕಲ್ಲಹಳ್ಳಿ

9. ಮಂಜುನಾಥಸ್ವಾಮಿ ಹೆಚ್.ಎಂ., ಕಾರ್ಯಪಾಲಕ ಅಭಿಯಂತರ, ಸಣ್ಣ ನೀರಾವರಿ ಇಲಾಖೆ: ವಾರ್ಡ್ 18 ವಿನೋಬನಗರ, ವಾರ್ಡ್ 19 ಶರಾವತಿ ನಗರ, ವಾರ್ಡ್ 21 ದುರ್ಗಿಗುಡಿ, ವಾರ್ಡ್ 26 ಅಶೋಕ ನಗರ

10. ರಮೇಶ್, ಕಾರ್ಯಪಾಲಕ ಅಭಿಯಂತರ, ಕರ್ನಾಟಕ ನಗರ ನೀರು ಸರಬರಾಜು ಇಲಾಖೆ : ವಾರ್ಡ್ 8 ಜೆ.ಪಿ.ಎನ್.ನಗರ, ವಾರ್ಡ್ 9 ಗಾಂಧಿ ನಗರ, ವಾರ್ಡ್ 20 ಹೊಸಮನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News