ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಅವರ 'ಜಿನ್ನಾ ಕೋಮುವಾದಿಯೇ' ಪುಸ್ತಕ ಬಿಡುಗಡೆ

Update: 2020-12-07 18:34 GMT

ದಾವಣಗೆರೆ: ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಅವರ 'ಜಿನ್ನಾ ಕೋಮುವಾದಿಯೇ' ಪುಸ್ತಕವನ್ನು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಅವರು ಜಿಲ್ಲಾ ವರದಿಗಾರರ ಕೂಟದಲ್ಲಿ ಬಿಡುಗಡೆ ಮಾಡಿದರು. 

ಈ ವೇಳೆ ಮಾತನಾಡಿದ ಎಲ್.ಹನುಮಂತಯ್ಯ ಅವರು, ಈಗ ಚರಿತ್ರೆಯನ್ನು ನಿರ್ಭೀತಿಯಿಂದ ಓದಲು ಸಾಧ್ಯವಿಲ್ಲದಾಗಿದೆ. ಚರಿತ್ರೆಯ ಓದುವ ಅಪವ್ಯಾಖ್ಯಾನ ನಡೆಯುತ್ತಿದೆ. ಭಾರತದ ವಿಭಜನೆಗೆ ಅನೇಕ ಕಾರಣಗಳಿವೆ. ವಿಭಜನೆ ವೇಳೆ ಬ್ರಿಟಿಷರು, ಅಂದಿನ ನಾಯಕತ್ವ ಸಂದರ್ಭವನ್ನು ಸರಿಯಾಗಿ ನಿಭಾಯಿಸದೆ ಇರುವುದು. ಮಹಾತ್ಮ ಗಾಂಧಿಜೀ ಅವರ ಆಹಿಂಸಾತ್ಮಕ ಚಳವಳಿ, ಪ್ರತ್ಯೇಕತೆವಾದಿಗಳ ಸೇರಿದಂತೆ ಹಲವು ಕಾರಣಗಳಿವೆ. ಜಿನ್ನಾ- ಸಾರ್ವಕರ ಒಂದು ನಾಣ್ಯದ ಎರಡು ಮುಖದಂತೆ. ಜಾತ್ಯತೀತ ಮತ್ತು ಪ್ರಜಾಪ್ರಭುತ್ವವನ್ನು ಮೂಲಭೂತವಾದದ ಮೂಲಕ ಸಂವಿಧಾನದ ಆಶಯಗಳನ್ನು ತೆರೆಗೆ ಸರಿಸುವ ಯತ್ನ ನಡೆಯುತ್ತಿವೆ ಎಂದರು. 

ಇಂದು ಗೋಡ್ಸೆ ವಿಜೃಂಭಿಸುವ ಮತ್ತು ವ್ಯಕ್ತಿಗಳನ್ನು ವಿಲನ್ ಮಾಡುವ ಯತ್ನಗಳು ನಡೆಯುತ್ತಿವೆ. ದೇಶ ವಿಭಜನಗೆ ಆಗಿನ ಜನಸಂಘದ ಪೂರ್ವಜರೂ ಸಹ ಕಾರಣರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಪುಸ್ತಕ ದೇಶದ ಸ್ವಾಸ್ಥ್ಯ ಕಾಪಾಡುವುದು ಈ ಪುಸ್ತಕದ ಉದ್ದೇಶವಾಗಿದೆ. ಜಿನ್ನಾ ಅವರನ್ನು ಆಡ್ವಾಣಿ ಅವರು ಸೆಕ್ಯುಲರ್ ಎಂದು ಬಹಿರಂಗವಾಗಿ ಹೇಳಿದ ಕಾರಣಕ್ಕೆ ಆರೆಸ್ಸೆಸ್ ಅವರನ್ನು ಮೂಲೆಗೆ ತಳ್ಳಿದೆ. ಜಾತ್ಯತೀತ ಕಾಪಾಡಬೇಕಾದರೆ, ಇತಿಹಾಸವನ್ನು ಸರಿಯಾಗಿ ಆರ್ಥೈಸಿಕೊಳ್ಳಬೇಕಾದರೆ ಒಳಗಣ್ಣು ತೆರೆಯಬೇಕು ಎಂದು ಹೇಳಿದರು.  

ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡಿ, ಇವತ್ತಿನ ಸಮಾಜದಲ್ಲಿ ಇತಿಹಾಸವನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುತ್ತಿದ್ದಾರೆ. ದಾಖಲೆಯಿಲ್ಲದೆ ಇತಿಹಾಸ ಬಾಯಿಗೆ ಬಂದಂತೆ ಹೇಳುವ ಕೆಲಸಗಳು ನಡೆಯುತ್ತಿವೆ. ಲೋಹಿಯಾ, ಡಾ.ಬಿ.ಆರ್.ಅಂಬೇಡ್ಕರ, ಖುಷ್ವಂತ ಸಿಂಗ್ ಅವರ ಜಿನ್ನಾ ಅವರ ಕುರಿತು ಅವರು ನೋಡಿದಂತಹ ವಿಷಯಗಳ ಅಕ್ಷರ ರೂಪದಲ್ಲಿ ತರಲಾಗಿದೆ. ಆದ್ದರಿಂದ ಸರಿಯಾದ ರೀತಿಯಲ್ಲಿ ಇತಿಹಾಸ ನೋಡುವವರ ಸಂಖ್ಯೆ ಕಡಿಮೆಯಾಗಿದೆ ಎಂದರು. 

ಈ ವೇಳೆ ಎಂ.ಟಿ.ಸುಭಾಷಚಂದ್ರ, ಕಡತಿ ತಿಪ್ಪೇಶಿ, ಸಾಹಿತಿ ಕಲೀಂಪಾಷಾ, ಇಮ್ತಿಯಾಜ್ ಹುಸೇನ್ ಸೇರಿದಂತೆ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News