ಬೇಲೂರು : ಮೂಲ ಸೌಕರ್ಯಗಳಿಂದ ವಂಚಿತವಾದ ಕುಟುಂಬಗಳು; ಆರೋಪ

Update: 2020-12-08 06:29 GMT

ಬೇಲೂರು :  ಬೇಲೂರಿನ ಹೃದಯ ಭಾಗದಲ್ಲಿರುವ 2ನೇ ವಾರ್ಡ್ ನ ನೆಹೆರು ನಗರ ಹಾಸನ ರಸ್ತೆ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ವಾಸಿಸುತ್ತಿರುವ ಕುಟುಂಬಗಳ ಗೋಳು ಕೇಳುವರೆ ಇಲ್ಲಾ ಎಂಬಂತಾಗಿದೆ.

ಸ್ವಾತಂತ್ರ್ಯ ಸಿಕ್ಕ 73 ವರ್ಷ ಕಳೆದರೂ ಆ ಬೀದಿಗೆ ಮೂಲ ಸೌಕರ್ಯವೇ ಇಲ್ಲ, ಅಲ್ಲಿ ವಾಸಿಸುವ ದಲಿತರು ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲಿನ ವಾಸಿಗಳು ರಸ್ತೆ, ಒಳ ಚರಂಡಿ, ಬೀದಿ ದೀಪ, ನೀರಿನ ವ್ಯವಸ್ಥೆ ಇಲ್ಲದೇ ಪರೆದಾಡುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸ್ಥಳೀಯ ಮುಖಂಡರಾದ ಮಂಜುನಾಥ್ ಮಾತನಾಡಿ, ಈ ದೇಶದ ಪ್ರಧಾನಿ ಇಡೀ ದೇಶ ತುಂಬ ಬಯಲು ಮುಕ್ತ  ಶೌಚಾಲಯ ನಿರ್ಮಾಣ ಮಾಡಲು ಪಣ ತೊಟ್ಟರೆ ಬೇಲೂರಿನ 2ನೆ ವಾರ್ಡ್ ನಿವಾಸಿಗಳ ಸ್ಥಿತಿ ಇಲ್ಲಿನ ಅಧಿಕಾರಿಗಳಿಗೆ ಕಾಣುತಿಲ್ಲವೇಕೆ ? ಪುರಸಭೆ ಮುಖ್ಯ ಅಧಿಕಾರಿ ಮಂಜುನಾಥ್ ರವರಿಗೆ ಎಷ್ಟೇ ಮನವಿ ಮಾಡಿದರು ಕ್ರಮ ಕೈಗೊಳುತಿಲ್ಲ ವೆಂದು ಆರೋಪಿಸಿದರು.

ಸರ್ಕಾರ ದಲಿತರಿಗೆ ಪ್ರತಿ ಬಜೆಟ್ನಲ್ಲಿ ಸಾವಿರಾರು ಕೋಟಿ ಮೀಸಲಿಟ್ಟರೂ ನಮ್ಮ ಸಮುದಾಯದ ಬೀದಿಗಳು ಅಭಿವೃದ್ಧಿ ಆಗದಿರುವುದು ಬೇಸರ ತಂದಿದೆ ಎಂದ ಅವರು ಈ ಬೀದಿಗೆ ಮೂಲ ಸೌಕರ್ಯ ಕಲ್ಪಿಸದಿದ್ದಾರೆ ಪುರಸಭೆ ಮುಂದೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.

ಸ್ಥಳೀಯರದ ಅನಂದ ದೇವರಾಜ್ ಮಾತನಾಡಿ, ಸುಮಾರು 20 ವರ್ಷಗಳಿಂದ ನಾವು ಅಧಿಕಾರಿಗಳಿಗೆ ಮಾನವಿ ಮಾಡಿದರೂ ನಮಗೆ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ. ಇಲ್ಲಿನ ಅಧಿಕಾರಿಗಳು ಶೌಚಾಲಯ ಕಲ್ಪಿಸುತ್ತಿಲ್ಲ, ನಮಗೆ ಬಯಲೇ ಶೌಚಾಲಯವಾಗಿದೆ. ಕುಡಿಯಲು ನೀರು, ಬೀದಿ ದೀಪ ಇಲ್ಲದೆ ಪರದಾಡುವಂತಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಂಜುನಾಥ್ ಆನಂದ್ ದೇವರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News