ಸುಡಾನ್‌ನಿಂದ ಬಂದ ಸೈನಿಕನಲ್ಲಿ ಹೊಸ ಮಲೇರಿಯಾ ಪ್ರಭೇದ ಪತ್ತೆ: ಕೇರಳ ಆರೋಗ್ಯ ಸಚಿವೆ

Update: 2020-12-11 09:44 GMT

ತಿರುನಂತವಪುರ: ಕೇರಳದಲ್ಲಿ ಪ್ಲಾಸ್ಮೋಡಿಯಂ ಓವಾಲೆ ಎಂಬ ಹೊಸ ಮಲೇರಿಯಾ ಪ್ರಬೇಧ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಸುಡಾನ್‌ನಿಂದ ಬಂದಿರುವ ಸೈನಿಕನಲ್ಲಿ ಹೊಸ ಪ್ರಬೇಧ ಪತ್ತೆಯಾಗಿದೆ ಎಂದು ಶೈಲಜಾ ಹೇಳಿದರು. ಸೈನಿಕ ಕಣ್ಣೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಮಯೋಚಿತ ಚಿಕಿತ್ಸೆ ಹಾಗೂ ತಡೆಗಟ್ಟುವ ಕ್ರಮಗಳಿಂದ ರೋಗ ಹರಡುವುದನ್ನು ತಡೆಗಟ್ಟಬಹುದು ಎಂದು ಶೈಲಜಾ ಹೇಳಿದರು.

ಮಲೇರಿಯಾಕ್ಕೆ ಕಾರಣವಾಗಿರುವ ಪ್ರೊಟೊರೊವಾವನ್ನು ಐದು ಪ್ರಬೇಧಗಳಲ್ಲಿ ಕಾಣಬಹುದು. ಪ್ಲಾಸ್ಮೋಡಿಯಮ್ ವೈವಾಕ್ಸ್, ಪ್ಲಾಸ್ಮೋಡಿಯಮ್ ಫಾಲ್ಸಿಫಾರಮ್, ಪ್ಲಾಸ್ಮೋಡಿಯಂ ಮಲೇರಿಯಾ, ಪ್ಲಾಸ್ಮೋಡಿಯಮ್ ನೋಲೆಸಿ ಹಾಗೂ ಪ್ಲಾಸ್ಮೋಡಿಯಂ ಓವಾಲೆ. ಇವುಗಳ ಪೈಕಿ ಪ್ಲಾಸ್ಮೋಡಿಯಮ್ ವಿವಾಕ್ಸ್ ಹಾಗೂ ಪಾಸ್ಮೋಡಿಯಂ ಫಾಲ್ಸಿಪಾರಮ್ ಭಾರತದಲ್ಲಿ ಹೆಚ್ಚು ಸಾಮಾನ್ಯವಾಗಿದೆ ಎಂದು Hindustan Times ವರದಿ ಮಾಡಿದೆ.

ಕಳೆದ ವರ್ಷ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಕೊರೋನ ವೈರಸ್ ಪ್ರಕರಣ ಪತ್ತೆಯಾಗಿತ್ತು. ಇದು ಭಾರತದಲ್ಲಿ ದೃಢಪಡಿಸಲ್ಪಟ್ಟಿದ್ದ ಮೊದಲ ಕೊರೋನ ಪ್ರಕರಣವಾಗಿತ್ತು. ವುಹಾನ್ ಯುನಿವರ್ಸಿಟಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಕೇರಳಕ್ಕೆ ವಾಪಸಾದ ಬಳಿಕ ಈ ವೈರಸ್ ಕಾಣಿಸಿಕೊಂಡಿತ್ತು. ಮೊದಲ ನಿಪಾಹ್ ರೋಗವು ಕೂಡ ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ 2018ರಲ್ಲಿ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News