ನೂತನ ಕೃಷಿ ಕಾನೂನುಗಳ ವಿರುದ್ಧ ಸುಪ್ರೀಂ ಕದ ತಟ್ಟಿದ ಭಾರತೀಯ ಕಿಸಾನ್ ಯೂನಿಯನ್

Update: 2020-12-11 11:08 GMT

ಹೊಸದಿಲ್ಲಿ : ಕೇಂದ್ರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೋರಿ ಭಾರತೀಯ ಕಿಸಾನ್ ಯೂನಿಯನ್ ಇಂದು ಸುಪ್ರೀಂ ಕೋರ್ಟ್‍ಗೆ ಅಪೀಲು ಸಲ್ಲಿಸಿದೆ.

ಈ ಮೂರು ಕಾನೂನುಗಳ ಜಾರಿ ಕೃಷಿ ಕ್ಷೇತ್ರವನ್ನು ವಾಣಿಜ್ಯೀಕರಣಗೊಳಿಸುತ್ತವೆ ಹಾಗೂ ರೈತರು ಕಾರ್ಪೊರೇಟ್ ಸಂಸ್ಥೆಗಳ ಹಂಗಿನಲ್ಲಿರುವಂತೆ ಮಾಡುತ್ತದೆ ಎಂದು ಯೂನಿಯನ್ ಅಧ್ಯಕ್ಷ ಭಾನು ಪ್ರತಾಪ್ ಸಿಂಗ್ ಅವರು ಸಲ್ಲಿಸಿರುವ ಈ ಅಪೀಲಿನಲ್ಲಿ ತಿಳಿಸಲಾಗಿದೆ.

ರಾಜಧಾನಿ ಗಡಿಯಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನೂ ಉಲ್ಲೇಖಿಸಿರುವ ಅಪೀಲು, ರೈಲ್ ರೋಕೋ ಚಳುವಳಿಯೂ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ ಎಂದು ಹೇಳಿದೆ.

ಸಾಕಷ್ಟು ಚರ್ಚೆಗಳಿಲ್ಲದೆ ನೂತನ ಕಾನೂನುಗಳನ್ನು ಜಾರಿಗೊಳಿಸಲಾಗಿದೆ ಎಂದೂ ಅಪೀಲಿನಲ್ಲಿ ಆರೋಪಿಸಲಾಗಿದೆ.

ಈ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಈಗಾಗಲೇ ಸಲ್ಲಿಸಲಾಗಿರುವ ಹಲವಾರು ಅಪೀಲುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಈ ಹಿಂದೆಯೇ ನೋಟಿಸ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News