ಕಾಬೂಲ್‌ನಲ್ಲಿ ಮತ್ತೆ ಉಗ್ರ ದಾಳಿ: ಕನಿಷ್ಠ ಮೂವರು ಮೃತ್ಯು

Update: 2020-12-13 17:33 GMT

ಕಾಬೂಲ್,ಡಿ.13: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ರವಿವಾರವೂ ಉಗ್ರರು ದಾಳಿ ನಡೆಸಿದ್ದು, ಪ್ರತ್ಯೇಕ ಬಾಂಬ್ ಹಾಗೂ ಬಂದೂಕು ದಾಳಿಗಳಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ.

ಉತ್ತರ ಕಾಬೂಲ್‌ನಲ್ಲಿ ಕವಚಾವೃತ ವಾಹನಕ್ಕೆ ಜೋಡಿಸಲಾಗಿದ್ದ ಬಾಂಬೊಂದು ಸ್ಫೋಟಿಸಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು ಇನ್ನಿಬ್ಬರಿಗೆ ಗಾಯಗಳಾಗಿವೆ ಎಂದು ಕಾಬೂಲ್ ಪೊಲೀಸ್ ವರಿಷ್ಠರ ವಕ್ತಾರ ಫಿರ್ದೂಸ್ ಫಾರಾಮಾರ್ಝ್ ತಿಳಿಸಿದ್ದಾರೆ. ಪೂರ್ವ ಕಾಬೂಲ್‌ನಲ್ಲಿ ಅಫ್ಘಾನ್ ಸರಕಾರದ ಪ್ರಾಸಿಕ್ಯೂಟರ್ ಒಬ್ಬರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಪ್ರಾಸಿಕ್ಯೂಟರ್ ಇಂದು ಬೆಳಗ್ಗೆ ತನ್ನ ಕಚೇರಿಗೆ ತೆರಳುತ್ತಿದ್ದಾಗ, ಅವರ ಮೇಲೆ ಕಾರ್ತೆ ನೌ ವಸತಿ ಪ್ರದೇಶದಲ್ಲಿ ದಾಳಿ ನಡೆದಿರುವುದಾಗಿ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಶನಿವಾರ ಅಫ್ಘಾನಿಸ್ತಾನದಲ್ಲಿ ಶಂಕಿತ ತಾಲಿಬಾನ್ ಉಗ್ರರು ಮೋರ್ಟಾರ್ ಶೆಲ್‌ಗಳಿಂದ ದಾಳಿ ನಡೆಸಿದ್ದರು.

ಆದರೆ ಈ ದಾಳಿಗಳ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ವಹಿಸಿಕೊಂಡಿಲ್ಲ. ಕಾಬೂಲ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಸೇರಿದಂತೆ 50ಕ್ಕೂ ಅಧಿಕ ಮಂದಿಯ ಹತ್ಯಾಕಾಂಡ ಸೇರಿದಂತೆ ಇತ್ತೀಚಿನ ತಿಂಗಳುಗಳಲ್ಲಿ ರಾಜಧಾನಿ ಕಾಬೂಲ್‌ನಲ್ಲಿ ನಡೆದಿರುವ ಹಿಂಸಾಕೃತ್ಯಗಳ ಹಿಂದೆ ಐಸಿಸ್ ಕೈವಾಡವಿರುವುದಾಗಿ ಆಫ್ಘಾನ್ ಸರಕಾರ ಆಪಾದಿಸಿದೆ,.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News