ಜಯಾ ಯಾಜಿ ಶಿರಾಲಿ

Update: 2020-12-28 12:11 GMT

ಭಟ್ಕಳ : ಹಿರಿಯ‌ ಕಥೆಗಾರ್ತಿ ಜಯಾ ಯಾಜಿ  ಶಿರಾಲಿ (67) ಅವರು ಭಟ್ಕಳದ ಶಿರಾಲಿಯ ಅವರ ಸ್ವಗೃಹದಲ್ಲಿ ಸೋಮವಾರ ನಿಧನರಾದರು.

ನಾಲ್ಕು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದ ಅವರು 'ಶಂಕ್ರಿ', 'ಅವಲೋಕನ, 'ಗುಟ್ಟು ಗುಟ್ಟೇ', 'ಗಿಣಿಮರಿ', 'ಮಂದಹಾಸ', 'ಜಾಜಿ ಗಿಡದ ಗುಬ್ಬಿಗಳು' ಮುಂತಾದ ಕೃತಿಗಳನ್ನು ನೀಡಿದ್ದಾರೆ.

ವಿವಾಹ ಪೂರ್ವದಲ್ಲಿ 'ಜಯಾ ಭಟ್ಟ  ಅಗಸೂರು', 'ಸಹ್ಯಾದ್ರಿ' ಕಾವ್ಯ ನಾಮದಲ್ಲಿ ಬರೆಯುತ್ತಿದ್ದ ಅವರು ಬರಹಗಾರ ನಾರಾಯಣ ಯಾಜಿ ಅವರನ್ನು  ಮದುವೆಯಾದ ನಂತರ ಜಯಾ ಯಾಜಿ ಶಿರಾಲಿ ಎಂಬ ಹೆಸರಿನಲ್ಲಿ ಬರೆಯುತ್ತಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ