ತಿರುವನಂತಪುರ ಮೇಯರ್ ಆಗಿ ಆರ್ಯ ರಾಜೇಂದ್ರನ್ ಮೇಯರ್ ಆಯ್ಕೆ

Update: 2020-12-28 15:21 GMT

ತಿರುವನಂತಪುರ, ಡಿ.28: ತಿರುವನಂತಪುರ ನಗರಪಾಲಿಕೆಯ ಮೇಯರ್ ಆಗಿ 21 ವರ್ಷದ ಆರ್ಯ ರಾಜೇಂದ್ರನ್ ಸೋಮವಾರ ಆಯ್ಕೆಯಾಗಿದ್ದಾರೆ.

ಮುದವನ್‌ಮುಗಲ್ ವಾರ್ಡ್‌ನಿಂದ ಎಲ್‌ಡಿಎಫ್ ಅಭ್ಯರ್ಥಿಯಾಗಿ ಪಾಲಿಕೆಗೆ ಆಯ್ಕೆಯಾಗಿದ್ದ ಆರ್ಯ, ಮೇಯರ್ ಆಯ್ಕೆಗೆ ನಡೆದ ಚುನಾವಣೆಯಲ್ಲಿ 54 ಮತ ಪಡೆದರು. ಅವರ ಪ್ರತಿಸ್ಪರ್ಧಿಗಳಾದ ಎನ್‌ಡಿಎ ಅಭ್ಯರ್ಥಿ ಸಿಮಿ ಜ್ಯೋತಿಷ್ 35 ಹಾಗೂ ಯುಡಿಎಫ್ ಅಭ್ಯರ್ಥಿ ಮೇರಿ ಪುಷ್ಪಂ 9 ಮತ ಪಡೆದರು. 100 ಕೌನ್ಸಿಲರ್‌ಗಳಲ್ಲಿ 99 ಮಂದಿ ಮತ ಚಲಾಯಿಸಿದ್ದು ಒಂದು ಮತ ಅಸಿಂಧುವಾಗಿದೆ. ಕ್ವಾರಂಟೈನ್‌ನಲ್ಲಿರುವ ಓರ್ವ ಕೌನ್ಸಿಲರ್ ಮತದಾನಕ್ಕೆ ಆಗಮಿಸಲಿಲ್ಲ.

ತಿರುವನಂತಪುರಂನ ಆಲ್‌ಸೈಂಟ್ಸ್ ಕಾಲೇಜಿನ ದ್ವಿತೀಯ ಪದವಿ ವಿದ್ಯಾರ್ಥಿನಿಯಾಗಿರುವ ಆರ್ಯ, ಸಿಪಿಐ(ಎಂ)ನ ವಿದ್ಯಾರ್ಥಿ ವಿಭಾಗ ‘ಬಾಲಸಂಗಮಮ್’ನ ರಾಜ್ಯಾಧ್ಯಕ್ಷೆಯಾಗಿದ್ದಾರೆ. ಸರಕಾರ ಮತ್ತು ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದಿಂದ ತಿರುವನಂತಪುರಂ ಅನ್ನು ಮಾದರಿ ನಗರವನ್ನಾಗಿಸಲು ಶ್ರಮಿಸುವುದಾಗಿ ಆರ್ಯ ರಾಜೇಂದ್ರನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News