ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಭಡ್ತಿ

Update: 2021-01-01 17:29 GMT

ಬೆಂಗಳೂರು, ಜ. 1: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ದೃಷ್ಟಿಯಿಂದ ಹಿರಿಯ ಅಧಿಕಾರಿಗಳಿಗೆ ಭಡ್ತಿ ನೀಡಲಾಗಿದೆ. ಅದಲ್ಲದೆ, ಮೂವರು ಐಎಎಸ್ ಅಧಿಕಾರಿಗಳು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾಗಿ ನಿಯುಕ್ತಿಗೊಂಡಿದ್ದು, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳಿಗೂ ಭಡ್ತಿ ನೀಡಲಾಗಿದೆ.

ಐಎಎಸ್ ಅಧಿಕಾರಿಗಳಿಗೆ ಭಡ್ತಿ: ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಕಪಿಲ್ ಮೋಹನ್, ಗೌರವ್ ಗುಪ್ತಾ ಹಾಗೂ ಜಿ.ಕುಮಾರ ನಾಯಕ್ ಅವರಿಗೆ ಹೆಚ್ಚುವರಿ ಕಾರ್ಯದರ್ಶಿ ಸ್ಥಾನಕ್ಕೆ ಭಡ್ತಿ ನೀಡಲಾಗಿದೆ.

ಐಎಎಸ್ ಅಧಿಕಾರಿಗಳಾದ ಮುಹಮ್ಮದ್ ಮೊಹ್ಸಿನ್, ಅತುಲ್ ಕುಮಾರ್ ತಿವಾರಿ, ರಿತೇಶ್ ಕುಮಾರ್ ಸಿಂಗ್, ವಿ.ರಶ್ಮಿ ಮಹೇಶ್, ರಾಜೇಂದರ್ ಕುಮಾರ್ ಕಟಾರಿಯಾ, ಸಮೀರ್ ಶುಕ್ಲಾ, ಡಾ.ಕೆ.ಜಿ. ಜಗದೀಶ್, ವಿಫುಲ್ ಬನ್ಸಾಲ್, ಡಾ.ಎಂ.ಟಿ.ರೇಜು, ತುಳಸಿ ಮುದ್ದಿನೇನಿ, ಕುಶ್ಬೂ ಜಿ.ಚೌದರಿ, ದೀಪ್ತಿ ಆದಿತ್ಯ ಕಾನಡೆ, ಉಜ್ವಲ್ ಕುಮಾರ್ ಘೋಷ್, ಎಂ.ದೀಪಾ, ರಾಜೇಂದ್ರ ಚೋಳನ್, ರಮಣ್ ದೀಪ್ ಚೌದರಿ, ಬಿ.ಬಿ.ಕಾವೇರಿ, ಸುಷ್ಮಾ ಗೋಡ್ಬೋಲೆ, ಟಿ.ಎಚ್.ಎಂ.ಕುಮಾರ್, ಡಾ.ಎಚ್.ಆರ್.ಮಹಾದೇವ್, ಎಸ್.ಜಿಯಾವುಲ್ಲಾ, ಎಸ್. ಬಿ.ಶೆಟ್ಟಣ್ಣವರ್, ಎಂ.ಸುರೇಶ್ ಬಾಬು, ಪವನ್ ಕುಮಾರ್ ಮಲಪತಿ, ಅನೀಸ್ ಕಣ್ಮಣಿ, ಚಾರುಲತಾ ಸೋಮಲ್, ಡಾ. ರಾಜೇಶ್ ಕುಮಾರ್, ಆರ್. ರಾಮಚಂದ್ರ, ಸುರಾಲ್ಕರ್ ವಿಕಾಸ್ ಕಿಶೋರ್, ನಿತೇಶ್ ಪಾಟೀಲ್ ಅವರಿಗೆ ಭಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.

ಐಪಿಎಸ್ ಅಧಿಕಾರಿಗಳಿಗೆ ಭಡ್ತಿ: ಐಪಿಎಸ್ ಅಧಿಕಾರಿಗಳಾದ ಡಾ. ಪಿ.ರವೀಂದ್ರನಾಥ್, ಡಾ. ವೈ.ಎಸ್.ರವಿಕುಮಾರ್, ಪ್ರದೀಪ್ ಗಂಟಿ, ಬಿ.ನಿಖಿಲ್, ಹರಿರಾಂ ಶಂಕರ್, ಕೆ.ರಾಮರಾಜನ್, ಅಡ್ಡೂರು ಶ್ರೀನಿವಾಸಲು, ಸೀಮಂತ್ ಕುಮಾರ್ ಸಿಂಗ್, ಪವಾರ್ ಪ್ರವೀಣ್‌ಮಧುಕರ್, ಎನ್.ಸತೀಶ್ ಕುಮಾರ್, ಡಾ.ಚೇತನ್ ಸಿಂಗ್ ರಾಥೋಡ್, ಅಮಿತ್ ಸಿಂಗ್, ಎನ್. ಶಶಿಕುಮಾರ್, ಅವರಿಗೆ ಭಡ್ತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News