ಅಂಬಾನಿ ಆರಂಭಿಸಿದ 5ಜಿ ದೊಡ್ಡ ಹಗರಣವೆಂದು ಅನಿಸುತ್ತಿದೆ: ನಟ ದರ್ಶನ್

Update: 2021-01-10 16:44 GMT

ಬೆಂಗಳೂರು, ಜ.10: ನಿರ್ಮಾಪಕರು ಎಲ್ಲಿಂದಲೋ ದುಡ್ಡು ತರುತ್ತಾರೆ. ಜನರಿಗೆ ಮನರಂಜನೆ ಮಾಡುವ ಉದ್ದೇಶದಿಂದ ನಾವೆಲ್ಲ ಜೀವನವನ್ನು ಪಣಕ್ಕಿಟ್ಟು ಸಿನಿಮಾ ಮಾಡುತ್ತೇವೆ. ಹೀಗಾಗಿ ಸಿನಿಮಾವನ್ನು ಮೊಬೈಲ್​ನಲ್ಲೋ ಅಥವಾ ಟಿವಿಯಲ್ಲ ನೋಡಿದರೆ ಮಜಾ ಇರಲ್ಲ ಎಂದು ನಟ ದರ್ಶನ್ ತಿಳಿಸಿದ್ದಾರೆ.

ಈ ಬಗ್ಗೆ ಫೇಸ್ಬುಕ್ ಲೈವ್ ನಲ್ಲಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳು ತೆರೆದಿವೆ. ಮದುವೆ ಮಂಟಪದಲ್ಲಿ ಸಾವಿರಾರು ಮಂದಿ ಸೇರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಜನ ಓಡಾಡುತ್ತಿದ್ದಾರೆ. ಎಲ್ಲ ಕಡೆ ಜನರಿದ್ದಾರೆ. ಆದರೆ, ಚಿತ್ರಮಂದಿಗಳನ್ನು ಮಾತ್ರ ತೆರೆಯುತ್ತಿಲ್ಲ. ಏಕೆಂದರೆ, ಇದರ ಹಿಂದೆ 5ಜಿ ಇದೆ ಎಂದು ಹೇಳಿದರು. ಅಂಬಾನಿ ಅವರು 5ಜಿ ಆರಂಭಿಸಿದ್ದಾರೆ. ಇದೊಂದು ದೊಡ್ಡ ಹಗರಣವೆಂದು ನನಗನಿಸುತ್ತಿದೆ ಎಂದು ತಿಳಿಸಿದ್ದಾರೆ. 

ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದರೆ 5ಜಿ ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ಮೊಬೈಲ್​ಗಳಲ್ಲಿ 5ಜಿ ರನ್​ ಆಗಲು ಈ ರೀತಿ ಮಾಡುತ್ತಿರಬಹುದು. ಇದು ನನ್ನ ಅನಿಸಿಕೆಯಾಗಿದೆ. ಆದರೆ, ಯಾವುದೇ ಕಾರಣಕ್ಕೂ ನಾವು ಓಟಿಟಿಗೆ ಸಿನಿಮಾಗಳನ್ನು ಕೊಡುವುದಿಲ್ಲ. ನಮ್ಮ ಸಿನಿಮಾ ಚಿತ್ರಮಂದಿರದಲ್ಲೇ ಬರುತ್ತದೆ. ಚಿತ್ರವನ್ನು ಚಿತ್ರಮಂದಿರದಲ್ಲಿ ಶೇ.50 ಅಲ್ಲ ಶೇ.25ರಷ್ಟು ಜನರು ಬಂದರೂ ಜನರು ಚಿತ್ರಮಂದಿರಲ್ಲಿ ಸಿನಿಮಾ ನೋಡಲಿ ಎಂದು ಸ್ಪಷ್ಟಪಡಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News