ಗಣರಾಜ್ಯೋತ್ಸವದಂದು ದಿಲ್ಲಿ ಗಡಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ: ರೈತ ಸಂಘಟನೆಗಳ ಸ್ಪಷ್ಟನೆ

Update: 2021-01-14 09:07 GMT

ಹೊಸದಿಲ್ಲಿ: ಜನವರಿ 26ರಂದು ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ‍್ಯಾಲಿಯನ್ನು ಹರ್ಯಾಣ-ದಿಲ್ಲಿ ಗಡಿ ಭಾಗದಲ್ಲಿ ಮಾತ್ರ ನಡೆಸಲಾಗುವುದು ಎಂದು ರೈತ ನಾಯಕರು ಸ್ಪಷ್ಟಪಡಿಸಿದ್ದಾರೆ.
ರೈತರು ಕೆಂಪುಕೋಟೆ ತನಕ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ ಗಣರಾಜ್ಯೋತ್ಸವ ಪಥ ಸಂಚಲನವನ್ನು ಹಾಳು ಮಾಡುವ  ಯೋಜನೆ ಹಾಕಿಕೊಂಡಿದ್ದಾರೆಂಬ ಕೆಲವರ ಹೇಳುತ್ತಿರುವುದು ಸತ್ಯಕ್ಕೆ ದೂರವಾದ ವಿಷಯ ಎಂದು ರೈತರ ಸಂಘಟಕರು ಹೇಳಿದ್ದಾರೆ.
ರೈತರಿಗೆ ಬಹಿರಂಗಪತ್ರ ಬರೆದಿರುವ ಭಾರತೀಯ ಕಿಸಾನ್ ಯೂನಿಯನ್(ರಜೆವಾಲ್ ಗ್ರೂಪ್)ನಾಯಕ ಬಲ್ಬಿರ್ ಸಿಂಗ್ ರೆಜಿವಾಲ್,ಗಣರಾಜ್ಯೋತ್ಸವ ದಿನ ನಡೆಯಲಿರುವ ಟ್ರ್ಯಾಕ್ಟರ್ ರ‍್ಯಾಲಿಯು ಹರ್ಯಾಣ-ದಿಲ್ಲಿ ಬಾರ್ಡರ್ ನಲ್ಲಿ ನಡೆಯಲಿದೆ. ಎಲ್ಲರೂ ಹೇಳುತ್ತಿರುವಂತೆ ಕೆಂಪುಕೋಟೆಯಲ್ಲಿ ರ‍್ಯಾಲಿ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗಣರಾಜ್ಯೋತ್ಸವದ ದಿನ ಆಯೋಜಿಸಲು ನಿರ್ಧರಿಸಿರುವ ಟ್ರ್ಯಾಕ್ಟರ್ ರ್ಯಾಲಿಯ ಮುನ್ನಾದಿನ ದಿಲ್ಲಿ ಗಡಿಗಳಲ್ಲಿ ರೈತರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಬೇಕೆಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮನವಿ ಮಾಡಿದೆ.
ದಿಲ್ಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಗೆ  ತೊಂದರೆಪಡಿಸುವ ಉದ್ದೇಶದಿಂದ ನಡೆಯಲಿರುವ ಟ್ರ್ಯಾಕ್ಟರ್ ರ‍್ಯಾಲಿ ಅಥವಾ ಯಾವುದೇ ಪ್ರತಿಭಟನೆಗೆ ತಡೆ ನೀಡಬೇಕೆಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News