ಸ್ಯಾಂಡಲ್‍ವುಡ್‍ ಡ್ರಗ್ಸ್ ದಂಧೆ ಪ್ರಕರಣ: ಆರೋಪಿ ಆದಿತ್ಯ ಆಳ್ವಗೆ ಡೋಪಿಂಗ್ ಪರೀಕ್ಷೆ

Update: 2021-01-14 12:48 GMT

ಬೆಂಗಳೂರು, ಜ.14: ಡ್ರಗ್ಸ್ ಪ್ರಕರಣ ಸಂಬಂಧ ಆರೋಪಿ ಆದಿತ್ಯ ಆಳ್ವನನ್ನು ಮಾದಕ ವಸ್ತು ಸೇವನೆ ಪತ್ತೆ ಮಾಡುವ ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಆರೋಪಿ ಆದಿತ್ಯ ಆಳ್ವನ ತಲೆಕೂದಲು ಹಾಗೂ ಉಗುರಿನ ಮಾದರಿಯನ್ನು ಪಡೆಯಲಾಗಿದ್ದು, ಶುಕ್ರವಾರ ಅಹಮದಾಬಾದ್ ಎಫ್‍ಎಸ್‍ಎಲ್‍ಗೆ ರವಾನೆ ಮಾಡಲಿದ್ದಾರೆ.

ಈ ಹಿಂದೆ ಸಿಸಿಬಿ ಆದಿತ್ಯಾ ಆಳ್ವಾ ರೆಸಾರ್ಟ್ ಮೇಲೆ ದಾಳಿ ನಡೆಸಿದಾಗ ಕೆಲ ಮಾದಕ ವಸ್ತು ಪತ್ತೆಯಾಗಿತ್ತು. ಸದ್ಯ ತನಿಖೆ ವೇಳೆ ಪ್ರಕರಣ ಆರೋಪಿಯಾಗಿರುವ ವಿರೇನ್‍ಖನ್ನಾ ಹಾಗೂ ಆದಿತ್ಯಾ ಆಳ್ವಾ ಇವರಿಬ್ಬರ ನಡುವೆ ಪಾರ್ಟಿ ಆಯೋಜನೆ ವಿಚಾರವಾಗಿ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಇಬ್ಬರೂ ಸಹ ಮಾತನಾಡುತ್ತಿರಲಿಲ್ಲ ಎಂಬುದರ ಬಗ್ಗೆ ವಿಚಾರಣೆ ವೇಳೆ ತಿಳಿದು ಬಂದಿದೆ ಸಿಸಿಬಿ ಮೂಲಗಳು ತಿಳಿಸಿವೆ.

ಇನ್ನು, ಪ್ರಕರಣದ ಆರೋಪಿಗಳಾದ ನಟಿ ರಾಗಿಣಿ ಮತ್ತು ಸಂಜನಾ ಗ್ರಲಾನಿ ಸೇರಿದಂತೆ ಇನ್ನಿತರೆ ಆರೋಪಿಗಳನ್ನು ಸಹ ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News