ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳಲಿರುವ ರಫೇಲ್ ಯುದ್ಧ ವಿಮಾನ

Update: 2021-01-18 17:48 GMT

ಹೊಸದಿಲ್ಲಿ, ಜ. 18: ಭಾರತೀಯ ವಾಯು ಪಡೆ ಖರೀದಿಸಿದ ರಫೇಲ್ ಯುದ್ಧ ವಿಮಾನ ಗಣರಾಜ್ಯೋತ್ಸವದ ದಿನದ ಪರೇಡ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳಲಿದೆ. ಅಲ್ಲದೆ, ಪರೇಡ್‌ನ ಅಂತಿಮ ಘಟ್ಟದಲ್ಲಿ ವೈಮಾನಿಕ ಪ್ರದರ್ಶನ ನೀಡಲಿದೆ.

15 ಯುದ್ಧ ವಿಮಾನಗಳು, 5 ಸಾಗಾಟ ವಿಮಾನಗಳು ಹಾಗೂ 1 ವಿಂಟೇಜ್ ವಿಮಾನ ಸೇರಿದಂತೆ ಒಟ್ಟು 42 ವಿಮಾನಗಳು ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದೆ ಎಂದು ಐಎಎಫ್‌ನ ವಕ್ತಾರ ವಿಂಗ್ ಕಮಾಂಡರ್ ಇಂದ್ರಾನಿಲ್ ನಂದಿ ತಿಳಿಸಿದ್ದಾರೆ.

ಗಣರಾಜ್ಯೋತ್ಸವದ ಪರೇಡ್‌ನಲ್ಲಿ ರಫೇಲ್ ಯುದ್ಧ ವಿಮಾನಗಳು ಪಾಲ್ಗೊಳ್ಳಲಿವೆ. ಐಎಎಫ್ ಹಾಗೂ ಭಾರತೀಯ ಸೇನಾ ಪಡೆಯ ಹೆಲಿಕಾಫ್ಟರ್‌ಗಳು ವೈಮಾನಿಕ ಪ್ರದರ್ಶನದ ಭಾಗವಾಗಲಿದೆ ಎಂದು ಅವರು ಹೇಳಿದ್ದಾರೆ. ರಾಜಪಥದಲ್ಲಿ ವೈಮಾನಿಕ ಪ್ರದರ್ಶನದ ಸಂದರ್ಭ ಕೆಲವು ರಚನೆಗಳು ಮೊದಲ ಬಾರಿಗೆ ಕಂಡು ಬರಲಿದೆ. ಪರೇಡ್ ಸಂದರ್ಭ ರುದ್ರಾ, ಸುದರ್ಶನ್, ರಕ್ಷಕ್, ಏಕಲವ್ಯ ಹಾಗೂ ಬ್ರಹ್ಮಾಸ್ತ್ರದ ರಚನೆಯನ್ನು ಕಾಣಬಹುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News