ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯ : ಶುಭ್‌ಮನ್ ಗಿಲ್ ಅರ್ಧಶತಕ

Update: 2021-01-19 03:46 GMT

ಬ್ರಿಸ್ಬೇನ್: ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಅವರ ತಾಳ್ಮೆಯ ಅರ್ಧಶತಕದ ನೆರವಿನೊಂದಿಗೆ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ದಿಟ್ಟ ಪ್ರತಿಹೋರಾಟ ನಡೆಸಿದೆ.

ಇತ್ತೀಚಿನ ವರದಿಗಳು ಬಂದಾಗ ಭಾರತ 2 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತ್ತು. ಭಾರತದ ಗೆಲುವಿಗೆ 196 ರನ್‌ಗಳ ಅಗತ್ಯವಿದೆ.  ಗಿಲ್ 91ಗಳಿಸಿ ವಿಕೆಟ್ ಒಪ್ಪಿಸಿದರು. 19 ರನ್ ಗಳಿಸಿದ ಪೂಜಾರ ಮತ್ತು ಅಜಿಂಕ್ಯ ರಹನೆ ಕ್ರೀಸ್‌ನಲ್ಲಿದ್ದಾರೆ.

328 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ, ರೋಹಿತ್ ಶರ್ಮಾ (7) ಅವರ ವಿಕೆಟ್ ಕಳೆದುಕೊಂಡಾಗ ಆತಂಕ ಮನೆಮಾಡಿತ್ತು. ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ಟಿಮ್ ಪೈನ್‌ಗೆ ಕ್ಯಾಚ್ ನೀಡಿ ಭಾರತ ತಂಡದ ಉಪನಾಯಕ ನಿರ್ಗಮಿಸಿದಾಗ ತಂಡದ ಮೊತ್ತ ಕೇವಲ 18. ಆದರೆ ಶುಭ್‌ಮನ್ ಗಿಲ್ ಅವರನ್ನು ಸೇರಿಕೊಂಡ ಚೇತೇಶ್ವರ ಪೂಜಾರ ತಾಳ್ಮೆಯ ಆಟ ಪ್ರದರ್ಶಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಚೇತೇಶ್ವರ ಪೂಜಾರ ಮೊದಲ 8 ರನ್‌ಗೆ 90 ಎಸೆತ ಬಳಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News