​ನಮ್ಮ ಭೂಭಾಗದಲ್ಲೇ ನಾವು ಗ್ರಾಮ ನಿರ್ಮಿಸಿದ್ದೇವೆ: ಅರುಣಾಚಲದ ಕುರಿತು ಚೀನಾ ಉದ್ಧತಟನದ ಪ್ರತಿಕ್ರಿಯೆ

Update: 2021-01-22 10:33 GMT

ಬೀಜಿಂಗ್,ಜ.22: ಭಾರತದ ಅರುಣಾಚಲ ಪ್ರದೇಶದಲ್ಲಿ ಚೀನಾ  ಹೊಸ ಗ್ರಾಮವೊಂದನ್ನು ನಿರ್ಮಿಸಿದೆ ಎಂದು ಉಪಗ್ರಹ ಚಿತ್ರಗಳನ್ನಾಧರಿಸಿ ಮಾಧ್ಯಮಗಳ ವರದಿ ಕುರಿತು ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯ, "ತನ್ನ ಸ್ವಂತ ಭೂಭಾಗದಲ್ಲಿ ಚೀನಾದ ನಿರ್ಮಾಣ ಚಟುವಟಿಕೆಗಳು ಸಹಜವಾಗಿದೆ ಹಾಗೂ ಇದು ದೇಶದ ಸಾರ್ವಭೌಮತ್ವದ  ವಿಚಾರವಾಗಿದೆ" ಎಂದು ಹೇಳಿದೆ.

"ಚೀನಾ-ಭಾರತ ಗಡಿಯ ಪೂರ್ವ ಸೆಕ್ಟರ್‍ನಲ್ಲಿ ಅಥವಾ ಝಂಗ್ನನ್ ಪ್ರಾಂತ್ಯದಲ್ಲಿ (ಚೀನಾದ ಟಿಬೆಟ್‍ನ ದಕ್ಷಿಣ ಭಾಗದಲ್ಲಿ) ಚೀನಾದ  ನಿಲುವು ದೃಢ ಹಾಗೂ ಸ್ಪಷ್ಟವಾಗಿದೆ. ಚೀನಾದ ಭೂಭಾಗದಲ್ಲಿ ಅಕ್ರಮವಾಗಿ ರಚಿಸಲ್ಪಟ್ಟಿರುವ ಅರುಣಾಚಲ ಪ್ರದೇಶ ಎಂದು ಹೇಳುವ ಜಾಗವನ್ನು ನಾವು ಯಾವತ್ತೂ ಮಾನ್ಯ ಮಾಡಿಲ್ಲ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಹೇಳಿದ್ದಾರೆ.

"ತನ್ನದೇ ಭೂಭಾಗದಲ್ಲಿ ಚೀನಾದ ಸಹಜ ನಿರ್ಮಾಣ ಕಾರ್ಯಗಳು ಸಂಪೂರ್ಣವಾಗಿ ಅದರ ಸಾರ್ವಭೌಮತ್ವದ ವಿಚಾರವಾಗಿದೆ" ಎಂದು ಹುವಾ ಅವರ ಹೇಳಿಕೆಯನ್ನು ಚೀನಾದ ವಿದೇಶಾಂಗ ಸಚಿವಾಲಯ ತನ್ನ ವೆಬ್‍ಸೈಟ್‍ನಲ್ಲಿ ಅಪ್ಡೇಟ್ ಮಾಡಿದೆ.

 ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‍ನ ಭಾಗ ಎಂದು ಚೀನಾ ಸದಾ ಹೇಳುತ್ತಾ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News