ಪಾಕ್‌ಗೆ ಚೀನಾದಿಂದ 5 ಲಕ್ಷ ಕೊರೋನ ಲಸಿಕೆ ಡೋಸ್ ಉಚಿತ ಪೂರೈಕೆ

Update: 2021-01-22 18:44 GMT

ಇಸ್ಲಾಮಾಬಾದ್ (ಪಾಕಿಸ್ತಾನ), ಜ. 22: ಚೀನಾವು ತನ್ನ ಕೋವಿಡ್-19 ಲಸಿಕೆ ‘ಸಿನೋಫಾರ್ಮ್’ನ 5 ಲಕ್ಷ ಡೋಸ್‌ಗಳನ್ನು ಪಾಕಿಸ್ತಾನಕ್ಕೆ ಉಚಿತವಾಗಿ ಜನವರಿ 31ರೊಳಗೆ ಪೂರೈಸಲು ಒಪ್ಪಿಕೊಂಡಿದೆ ಎಂದು ಪಾಕಿಸ್ತಾನದ ವಿದೇಶ ಸಚಿವ ಮೆಹ್ಮೂದ್ ಖುರೇಶಿ ಗುರುವಾರ ಹೇಳಿದ್ದಾರೆ.

‘‘ಈ ಲಸಿಕೆಯನ್ನು ಕೊಂಡೊಯ್ಯಲು ತಕ್ಷಣ ವಿಮಾನ ಕಳುಹಿಸಿ ಎಂದು ಅವರು ಹೇಳಿದ್ದಾರೆ. ಹಾಗಾಗಿ, ಇದು ನಮಗೆ ಶುಭ ಸುದ್ದಿಯಾಗಿದೆ. ಈ ಲಸಿಕೆಯನ್ನು ಬಳಸುವ ಮೂಲಕ ನಾವು ಸುರಕ್ಷಿತವಾಗಿರಬಹುದು ಎಂದು ನನಗೆ ಅನ್ನಿಸುತ್ತಿದೆ’’ ಎಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

ತುರ್ತು ಅವಶ್ಯಕತೆಗಾಗಿ ಸಿನೋಫಾರ್ಮ್ ಲಸಿಕೆಯನ್ನು ಬಳಕೆಗೆ ಪಾಕಿಸ್ತಾನದ ಆರೋಗ್ಯ ನಿಯಂತ್ರಣ ಪ್ರಾಧಿಕಾರವು ಸೋಮವಾರ ಅಂಗೀಕಾರ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News