ʼಹಿಂದಿ ಭಾಷೆಯ ತಿರಸ್ಕಾರವೇಕೆʼ ಎಂದು ಪ್ರಶ್ನಿಸಿದ ಸಾಹಿತಿ ದೊಡ್ಡರಂಗೇಗೌಡ: ಸಾಮಾಜಿಕ ತಾಣದಾದ್ಯಂತ ತರಾಟೆ

Update: 2021-01-23 17:27 GMT

ಬೆಂಗಳೂರು, ಜ. 23: ‘ಹಿಂದಿ ಭಾಷೆಯ ತಿರಸ್ಕಾರ ಏಕೆ, ಹಿಂದಿ ನಮ್ಮ ರಾಷ್ಟ್ರ ಭಾಷೆ' ಎಂಬ 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ ಅವರು ಪತ್ರಿಕೆಯೊಂದರ ಸಂದರ್ಶನದಲ್ಲಿ ನೀಡಿದ ಹೇಳಿಕೆಗೆ ಸಾಹಿತಿಗಳು, ಕನ್ನಡಪರ ಕಾರ್ಯಕರ್ತರು ಹಾಗೂ ನೆಟ್ಟಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಈ ಮಧ್ಯೆ ಖಾಸಗಿ ವೆಬ್‍ಸೈಟ್ ಸಂದರ್ಶನದಲ್ಲಿ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ದೊಡ್ಡರಂಗೇಗೌಡ, ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡಕ್ಕೆ ಆದ್ಯತೆ, ಕನ್ನಡ ಭಾಷೆಗೆ ಮೊದಲ ಮಣೆ. ನಮ್ಮ ಕನ್ನಡ ಭಾಷೆಯೇ ರಾಷ್ಟ್ರ ಭಾಷೆ' ಎಂದು ಹೇಳಿದರು.

‘ಸಂವಿಧಾನದಲ್ಲಿ ಒಪ್ಪಿತ ಎಲ್ಲ ಭಾಷೆಗಳು ಸರಿಸಮ. ಎಲ್ಲ ಭಾಷೆಗಳಿಗೂ ಸಮಾನ ಸ್ಥಾನ ನೀಡಬೇಕು. ಹಿಂದಿ ಯಾವುದೇ ಸಂದರ್ಭದಲ್ಲಿಯೂ ರಾಷ್ಟ್ರ ಭಾಷೆಯಲ್ಲ. ಯಾವುದೇ ಒಂದು ಭಾಷೆಯನ್ನು ಪ್ರಭುತ್ವ ಏರಿಕೆ ಮಾಡುವುದನ್ನು ನಾನು ಖಂಡತುಂಡವಾಗಿ ವಿರೋಧಿಸುತ್ತೇನೆ. ಅಲ್ಲದೆ, ಯಾವುದೇ ಒಂದು ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡುವುದು ಕೂಡ ತಪ್ಪು. ಈ ವಿಚಾರದಲ್ಲಿ ಕೇಂದ್ರ ಸರಕಾರ ತಪ್ಪು ಮಾಡುತ್ತಿದೆ' ಎಂದು ದೊಡ್ಡರಂಗೇಗೌಡ ಆಕ್ಷೇಪಿಸಿದರು.

‘ದೊಡ್ಡ ರಂಗೇಗೌಡ ಅವರು ನನ್ನ ಗೆಳೆಯರು. ಮನುಷ್ಯನಿಗೆ ಆಸೆ ಇರಬೇಕು. ಆದರೆ, ಇಷ್ಟೊಂದು ಕನಿಕರ ಸ್ಥಿತಿಗೆ ವ್ಯಕ್ತಿತ್ವವನ್ನು ದೂಡುವ ಆಸೆ ಆತ್ಮಗೌರವದ ನಾಶವೇ ಸರಿ. ಇವರ ಜಾಣ ಅಜ್ಞಾನಕ್ಕೆ ಕನಿಕರವಾಗುತ್ತಿದೆ. ಇದು ಕನ್ನಡದ ದುರಂತ. ಇದೊಂದು ಮಾತಿನಿಂದ ಅವರ ಕನ್ನಡದ ಸೇವೆ ಕಸದಂತೆ ಗುಡಿಸಿಹೋಗಿದೆ'

-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ

‘ಹಿಂದಿಯ ವಿರುದ್ಧ ತೋರುವ ವಿರೋಧ ಅದು ಕೇವಲ ಹಿಂದಿ ಭಾಷೆಯ ವಿರುದ್ಧ ತೋರುವ ಪ್ರತಿರೋಧ ಮಾತ್ರವಲ್ಲ. ಅದು ಪ್ರಬಲ ಕೇಂದ್ರೀಕೃತ ಅಧಿಕಾರ ವ್ಯವಸ್ಥೆಯ ವಿರುದ್ಧ ತೋರುವ ಪ್ರತಿರೋಧವೂ ಆಗಿರುತ್ತದೆ.'

-ಡಾ.ರಂಗನಾಥ ಕಂಟನಕುಂಟೆ, ಲೇಖಕ

‘ಗೌಡರೇ ಈಗ ನೀವು ದೊಡ್ಡ ಗೌಡರು. ನಿಮ್ಮ ರಾಷ್ಟ್ರಭಾಷೆ ಕನ್ನಡ, ಕನ್ನಡ, ಕನ್ನಡ ಕೇಳಿಸಿತೇ..?'

-ಅಗ್ರಹಾರ ಕೃಷ್ಣಮೂರ್ತಿ, ಹಿರಿಯ ಸಾಹಿತಿ

‘ಪ್ರವಾಹದಲ್ಲಿ ಹಾವೇರಿ ಜಿಲ್ಲೆಯಲ್ಲಿ ಕೊಚ್ಚಿಹೋದ ವೀಳ್ಯದೆಲೆ ತೋಟಗಳಿಗೆ ಕರ್ನಾಟಕ ಸರಕಾರ ಇನ್ನೂ ಪರಿಹಾರವನ್ನೇ ಕೊಡದಿರುವಾಗ ಅಲ್ಲಿ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಅನೈತಿಕವಾದುದು, ಕನ್ನಡಿಗರ ಯಾವ ಸಮಸ್ಯೆಯ ಗಂಧ ಗಾಳಿಯ ಅರಿವೇ ಇರದ ದೊಡ್ಡರಂಗೇಗೌಡರನ್ನು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಮತ್ತಷ್ಟು ಅನೈತಿಕವಾದದ್ದು. ದೊಡ್ಡರಂಗೇಗೌಡರು ಕನ್ನಡಿಗರ ಕಷ್ಟ ಮತ್ತು ಸಂಕಟಗಳ ಬಗ್ಗೆ ಅರಿವುಳ್ಳವರಿಗೆ ಸರ್ವಾಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟು ಅಲ್ಲಿಂದ ನಿರ್ಗಮಿಸುವುದು ಅವರಿಗೆ ಅವರೇ ಮಾಡಿಕೊಳ್ಳುವ ಒಳಿತು'

-ಎಲ್ಸಿ ನಾಗರಾಜ್, ಕವಿ, ಕೃಷಿಕ

‘ಹಿಂದಿ ಹೇರಿಕೆಯ ಆತಂಕ ಕಾಡುತ್ತಿರುವ ಈ ಸಂದರ್ಭದಲ್ಲಿ ಹಿಂದಿಯ ಪರವಾಗಿ ನಿಲವು ಪ್ರಕಟಿಸಿರುವ ದೊಡ್ಡರಂಗೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ನಾನಂತೂ ಬಹಿಷ್ಕರಿಸುತ್ತೇನೆ. ಹಿಂದಿ ಹೇರಿಕೆಯನ್ನು ವಿರೋಧಿಸುವ ಎಲ್ಲರೂ ಬಹಿಷ್ಕಾರ ಮಾಡುವಂತೆ ಮನವಿ ಮಾಡುತ್ತೇನೆ'

-ಲಕ್ಷ್ಮಣ ಕೊಡಸೆ, ಹಿರಿಯ ಪತ್ರಕರ್ತರು

‘ಈ ನೆಲಕ್ಕೆ ಸಂಬಂಧವೇ ಇಲ್ಲದ ಹಿಂದಿ ಕಲಿಯಿರಿ ಎಂದು ನಗೆಪಾಟಲಿಗೀಡಾಗುವ ಮೊದಲು. ನಮ್ಮ ನೆಲದ ಪ್ರಾದೇಶಿಕ ಭಾಷೆಗಳ ಬಗ್ಗೆಯೇ ಹೆಗ್ಗೋಡಿನ ಅಕ್ಷರ ಪ್ರಕಾಶನದವರು ಹೊರತಂದಿರುವ ಲಿಂಗ್ವಿಸ್ಟಿಕ್ ಸರ್ವೇ ಕುರಿತಾದ ಪುಸ್ತಕವನ್ನು ದೊಡ್ಡರಂಗೇಗೌಡರು ಶ್ರದ್ಧೆಯಿಂದ ಕುಳಿತು ಓದುವುದು ಒಳಿತು'

-ಟಿ.ಕೆ.ದಯಾನಂದ, ಲೇಖಕ

‘ಹಿರಿಯರಿಗೇ ಹಿಂದಿ 'ರಾಷ್ಟ್ರ ಭಾಷೆ' ಎಂಬ ಭ್ರಮೆ ಹೋಗಿಲ್ಲವೆಂದರೆ, ಇನ್ನು ಸಾಮಾನ್ಯರ ಪಾಡೇನು? ಸಮ್ಮೇಳನದಲ್ಲಿ ಹಿಂದಿ ಪರ ನಿರ್ಣಯ ಕೈಗೊಳ್ಳದಿದ್ದರೆ ಅದೇ ಕನ್ನಡಿಗರ ಪುಣ್ಯ.

-ಮಂಸೋರೆ, ಚಿತ್ರ ನಿರ್ದೇಶಕ

‘ಹಿಂದಿ ರಾಷ್ಥ್ರ ಭಾಷೆಯಲ್ಲ. ಅದು ಕೇವಲ ಸಂಪರ್ಕ ಭಾಷೆ ಮಾತ್ರ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಒಪ್ಪಿಕೊಂಡಿರುವ ಎಲ್ಲ ಭಾಷೆಗಳಿಗೂ ಅಷ್ಟೇ ಮನ್ನಣೆ ನೀಡಬೇಕು. ರಾಷ್ಟ್ರಭಾಷೆ ಎಂಬ ಪರಿಭಾಷೆಯೇ ತಪ್ಪು. ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಹಿಂದಿಯನ್ನು ಭಾಷೆಯಾಗಿ ವಿರೋಧಿಸಬಾರದು, ಬದಲಾಗಿ ಅದರ ಆಕ್ರಮಣಕಾರಿ ಧೋರಣೆ ಮತ್ತು ಭಾಷೆಗಳ ಕತ್ತು ಹಿಸುಕುವ ಮನೋಭಾವನ್ನು ವಿರೋಧಿಸಬೇಕು. ದೊಡ್ಡರಂಗೇಗೌಡರ ಹಿಂದಿ ಪರವಾದ ಅವರ ನಿಲುವನ್ನು ಒಪ್ಪಲಾಗದು'

-ಡಾ.ಕೋ.ವೆಂ.ರಾಮಕೃಷ್ಣೇಗೌಡ, ಅಧ್ಯಕ್ಷರು ಕನ್ನಡ ಸಂಘರ್ಷ ಸಮಿತಿ

ಹಿಂದಿ ರಾಷ್ಟ್ರ ಭಾಷೆ ವಿವಾದದ ಸುದ್ದಿಗೆ

ದೊಡ್ಡರಂಗೇಗೌಡರು ಅಪ್ಪಟ ಜನಪದ ಕವಿ. ಅವರ ಬಗ್ಗೆ ಗೌರವವಿದೆ. ಆದರೆ ಹಿಂದಿ ರಾಷ್ಟ್ರ ಭಾಷೆ ಎಂದಿರುವುದು ಸರಿಯಲ್ಲ. ಇದು ಈಗ ಇದ್ದಕ್ಕಿದ್ದಂತೆ ಜ್ಞಾನೋದಯವಾದಂತೆ ಹೇಳುತ್ತಿರುವುದಲ್ಲ, ಅವರ ಬಾಯಲ್ಲಿ ಸುಳ್ಳು ಹೇಳಿಸಲಾಗುತ್ತಿದೆ. ಅದನ್ನು ಅವರು ವಾಪಸ್ ಪಡೆಯಬೇಕು, ಇಲ್ಲದಿದ್ದರೆ ಸಾಹಿತ್ಯ ಸಮ್ಮೇಳನದಲ್ಲಿ ಅವರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ.

-ಟಿ.ಎ.ನಾರಾಯಣಗೌಡ, ಕರವೇ ಅಧ್ಯಕ್ಷ

ಹಿರಿಯರಿಗೇ ಹಿಂದಿ 'ರಾಷ್ಟ್ರ ಭಾಷೆ' ಎಂಬ ಭ್ರಮೆ ಹೋಗಿಲ್ಲವೆಂದರೆ, ಇನ್ನು ಸಾಮಾನ್ಯರ ಪಾಡೇನು? ಸಮ್ಮೇಳನದಲ್ಲಿ ಹಿಂದಿ ಪರ ನಿರ್ಣಯ ಕೈಗೊಳ್ಳದಿದ್ದರೆ ಅದೇ ಕನ್ನಡಿಗರ ಪುಣ್ಯ.

Posted by Manso Re on Friday, 22 January 2021

ರ್ರೀ ಮಾನ್ಯ ದೊಡ್ಡರಂಗೇಗೌಡರೆ... ನೋಡಿ ನಿಮಗೆ ಹಿಂದಿ, ಪ್ರಭುತ್ವ, ಅದರ ಆಟಾಟೋಪ, ಇದಲ್ಲೆದರ ಗಂಧಗಾಳಿ ಗೊತ್ತಿಲ್ಲ. ನೀವಿನ್ನು ಓಬಿರಾಯನ ಕಾಲದ...

Posted by ನಾಗೇಗೌಡ ಕೀಲಾರ ಶಿವಲಿಂಗಯ್ಯ on Friday, 22 January 2021

ಹಿಂದಿ ನಮ್ಮ ರಾಷ್ಟ್ರ ಭಾಷೆ. ~ ದೊಡ್ಡರಂಗೇಗೌಡ, 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಇಂತ ಸಂವಿಧಾನ ವಿರೋಧಿ ಬಕೆಟ್ ಗಳಿಂದ ಕನ್ನಡ ಉದ್ದಾರ ಆದ ಹಾಗೆ

Posted by Sharath Chandra on Friday, 22 January 2021

ಸಾಹಿತ್ಯ ಸಮ್ಮೇಳನದಲ್ಲಿ ದೊಡ್ಡಮಂಗೇಗೌಡರ ಜೊತೆ ವೇದಿಕೆ ಹಂಚಿಕೊಳ್ಳುವವರಿಗೆ ಒಂದು ಸಣ್ಣ ಮನವಿ. ಸಮ್ಮೇಳನಾಧ್ಯಕ್ಷರಿಗೆ ಹಿಂದಿ ಹೇರಿಕೆ ಬಗ್ಗೆ ಪಾಠ ಮಾಡಿ, ವೇದಿಕೆಯಲ್ಲೇ ಮುಖದ ಮೇಲೆ ನೀರಿಳಿಸಿ.

Posted by Pragath K. R on Friday, 22 January 2021

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾದ ದೊಡ್ಡರಂಗೇಗೌಡರು ಹಿಂದಿ ವಿರೋಧ ಮತ್ತು ತಿರಸ್ಕಾರ ಯಾಕೆ? ಎಂದು ಪ್ರಶ್ನೆ...

Posted by Ranganatha Kantanakunte on Friday, 22 January 2021

ದೊಡ್ಡರಂಗೇಗೌಡರೇ, ಇವತ್ತು ಸಣ್ಣ ಮಕ್ಕಳಿಗೂ ಗೊತ್ತಿದೆ, ಹಿಂದಿ ರಾಷ್ಟ್ರಭಾಷೆ ಅಲ್ಲ ಅನ್ನೋದು. ಇಷ್ಟು ವಯಸ್ಸಾಗಿರುವ ನಿಮಗೆ ತಿಳಿಯದೇ ಇಷ್ಟು...

Posted by Dinesh Kumar Dinoo on Friday, 22 January 2021

ದೊಡ್ಡ ಬಕೆಟ್ ಗೌಡ್ರೆ, ತಿರಸ್ಕಾರ ಹಿಂದಿ ಭಾಷೆ ಬಗ್ಗೆ ಅಲ್ಲ. ನಿಮ್ಮಂತ ಬಕೆಟ್‌ಗಳ ಬಗ್ಗೆ. ಅವರ ಮನೆ ಬಳಿ ಬಕೆಟ್ ಹಿಡ್ಕೊಂಡು ಕಾಯ್ತಾ ಬಕೆಟ್...

Posted by Shashidhar Hemmady on Friday, 22 January 2021

ಇವರಿಗೆ ತಿಳಿ ಹೇಳುವಷ್ಟು ದೊಡ್ಡವಳು ನಾನಲ್ಲ.. ಅದರೂ ಒಂದು ಮಾತು... ನಾವ್ ಕನ್ನಡಿಗರು ವಿಶಾಲ ಮನಸ್ಸಿನವರು ಅಲ್ವ.. ಅದಕ್ಕೆ ಕನ್ನಡ ಭಾಷೆಯ...

Posted by ಜನನಿ ವತ್ಸಲ on Friday, 22 January 2021

ಜಾಗತಿಕ ಸಾಹಿತ್ಯ ಲೋಕ ಹಿಂದೆಂದೂ ಕಂಡಿರದ ಕೇಳಿರದ ಓದಿರದ ಅದ್ಭುತ ಕವನ ಇಲ್ಲಿದೆ. ಇದನ್ನು ಬರೆದವರು ನಮ್ಮ ಕನ್ನಡದ ಹೆಮ್ಮೆಯ ಕವಿ. ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.

Posted by Shrinivas Karkala on Friday, 22 January 2021

ಇದೇನು ಅರಿವಿನ ಕೊರತೆಯೊ ಅಥವಾ ಉದ್ದೇಶಪೂರ್ವಕವಾಗಿ ಆಡಿ(ಸಿ)ರುವ ಮಾತುಗಳೊ!! ಅರಿವಿನ ಕೊರತೆಯಾಗಿದ್ದರೆ, ತಿಳಿದವರು ನಾಲ್ಕು ಜನ ಇವರನ್ನು ಭೇಟಿ...

Posted by Shruthi Hm on Friday, 22 January 2021

ಕರ್ನಾಟಕದ ರಾಷ್ಟ್ರ ಭಾಷೆ ಕನ್ನಡ, ದೊಡ್ಡ ರಂಗೇಗೌಡರ ರಾಷ್ಟ್ರ ಭಾಷೆ ಹಿಂದಿ

Posted by Sanathkumar Belagali on Friday, 22 January 2021

ತೇರ್ ಮೆ ಬೈಠ್ಕೆ ಅಂಬರ್ ಮೆ ನೇಸರ್ ಹಸ್ತಾ ಹೈ... ಮರಗಿಡ ತೂಗ್ಯಾ ಹೈ..

Posted by Bellairu Mohammed Haneef on Friday, 22 January 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News