ಜಾತಿ ನಿಂದನೆ ಆರೋಪ: 'ಝೀ ಕನ್ನಡ' ವಾಹಿನಿ ಮುಖ್ಯಸ್ಥ ಸೇರಿ ಹಲವರ ವಿರುದ್ಧ ಎಫ್‍ಐಆರ್

Update: 2021-01-23 16:03 GMT

ಬೆಂಗಳೂರು, ಜ.23: ವಾಹಿನಿಯಲ್ಲಿ ಪ್ರಸಾರವಾಗುವ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಜಾತಿ ನಿಂದನೆ ಮಾಡಿದ ಆರೋಪದಡಿ ಝೀ ಕನ್ನಡ ವಾಹಿನಿ ಮುಖ್ಯಸ್ಥರು ಸೇರಿ ಹಲವರ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಪ್ರಕರಣದ ತನಿಖೆಯನ್ನು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ನಡೆಸಲಿದ್ದು, ಅವರೇ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಲಿದ್ದಾರೆ.

ಇತ್ತೀಚೆಗಷ್ಟೇ ‘ಕಾಮಿಡಿ ಕಿಲಾಡಿಗಳು’ ಸೀಸನ್ 2 ಪ್ರಸಾರವಾಗಿದ್ದು, ಇದರಲ್ಲಿ ಕಲಾವಿದರೊಬ್ಬರು, ಕೊಕ್ಕೆ ಕೊರಮ ಜಾತಿಯನ್ನು ನಿಂದಿಸುವ ಮಾತುಗಳನ್ನಾಡಿದ್ದಾರೆ. ಆ ಸಂಭಾಷಣೆಯಿಂದ ಹಲವರಿಗೆ ನೋವಾಗಿದೆ ಎಂದು ನಂದೀಶ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News