ಕ್ವಾರೆ, ಕ್ರಷರ್ ಗಳ ಮೇಲೆ ಪೊಲೀಸರ ದಾಳಿ: ಅಪಾರ ಪ್ರಮಾಣದ ಸ್ಫೋಟಕ, ಮೆಗ್ಗರ್, ಜಿಲೆಟಿನ್ ವಶ

Update: 2021-01-23 17:03 GMT

ಮಂಡ್ಯ, ಜ.23: ಜಿಲ್ಲೆಯ ನಾಗಮಂಗಲ ಮತ್ತು ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಲ್ಲು ಗಣಿಕಾರಿಗೆ ಮತ್ತು ಕ್ರಷರ್ ಗಳ ಮೇಲೆ ಪೊಲೀಸರು ಏಕಕಾಲದಲ್ಲಿ ಶನಿವಾರ ದಾಳಿ ನಡೆಸಿ ಅಕ್ರಮ ಸ್ಫೋಟಕಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಎಸ್ಪಿ ಕೆ.ಪರಶುರಾಂ ಮತ್ತು ಎಎಸ್ಪಿ ವಿ.ಧನಂಜಯ ಅವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಮೆಗ್ಗರ್ ಗಳು, ಎಲೆಕ್ಟ್ರಿಕ್ ಡಿಟೋನೇಟರ್ ಗಳು, ಜಿಲೆಟಿನ್‍ಗಳು, ಇತರೆ ವಸ್ತುಗಳನ್ನು ವಶಪಡಿಸಿಕೊಂಡರು.

ಶ್ರೀರಂಗಪಟ್ಟಣ ತಾಲೂಕು ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಕೆರೆ ಗ್ರಾಮದ ರಾಮದೇವ್ ಎಂಬವರಿಗೆ ಸೇರಿದ ಜೆ.ಜೆ.ಕ್ರಷರ್ ನ ಕ್ವಾರೆಯ ಮೇಲೆ ದಾಳಿ ನಡೆಸಿ ಪರವಾನಗಿ ಇಲ್ಲದೆ ಬಂಡೆ ಸಿಡಿಸಲು ಬಳಸುತ್ತಿದ್ದ ಎರಡು ಮೆಗ್ಗರ್ ಗಳು, 315 ಎಲೆಕ್ಟ್ರಿಕ್ ಡಿಟೋನೆಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಾಮಮಂಗಲ ತಾಲೂಕು ಬೆಳ್ಳೂರು ಠಾಣೆ ವ್ಯಾಪ್ತಿಯ ಕರಡಹಳ್ಳಿ ಗ್ರಾಮದ ಎಲ್ಲೆಗೆ ಸೇರಿದ ಶ್ರೀಲಕ್ಷ್ಮಿವೆಂಕಟೇಶ್ವರ ಕ್ರಷರ್, ಕಲ್ಲುಕ್ವಾರೆಯಲ್ಲಿ ಬೋಡ್ರಸ್ ಕಲ್ಲುಗಳನ್ನು ಮಾಡಲು ಸಂಗ್ರಹಿಸಿದ್ದ 66 ಜಿಲೆಟಿನ್‍ಗಳು ಮತ್ತು 18 ಎಲೆಕ್ಟ್ರಿಕ್ ಡಿಟೋನೇಟರ್ ಗಳನ್ನು ವಶಕ್ಕೆ ಪಡೆದು ಕಲೆಗೆರೆ ಗ್ರಾಮದ ಕೆ.ಸಿ.ನಾಗರಾಜು, ಶಿವಣ್ಣ ಅಲಿಯಾಸ್ ಜಾಕಿಶಿವ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News