ಸಾಗರ: ಮಸ್ಜಿದೇ ಮೊಹಮ್ಮದೀಯ ಉದ್ಘಾಟನೆ

Update: 2021-02-06 18:56 GMT

ಸಾಗರ, ಫೆ.6: ಇಲ್ಲಿನ ನವಾಯತ್ ಕಾಲನಿಯಲ್ಲಿ ನಿರ್ಮಿಸಲಾದ ನೂತನ ಮಸೀದಿ ‘ಮಸ್ಜಿದೇ ಮೊಹಮ್ಮದೀಯ’ ಶುಕ್ರವಾರ ಉದ್ಘಾಟನೆಗೊಂಡಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮೀಅತೇ ಅಹ್ಲೇ ಹದೀಸ್ ಕರ್ನಾಟಕ ಮತ್ತು ಗೋವಾ ಇದರ ಅಧ್ಯಕ್ಷ ಶೈಖ್ ಅಬ್ದುಲ್ ವಹಾಬ್ ಜಾಮಇ, ರಾಜ್ಯದಲ್ಲಿರುವ ವಿವಿಧ ಸಂಘಟನೆಗಳ ನಡುವಿನ ಐಕ್ಯದ ಮಹತ್ವವನ್ನು ವಿವರಿಸಿದರು. ಈ ಮಸೀದಿಯಲ್ಲಿ ಅಹ್ಲೇ ಹದೀಸ್, ಎಸ್.ಕೆ.ಎಸ್.ಎಂ. ಮತ್ತು ಕೆ.ಎಸ್.ಎ. ಸಂಘಟನೆಗಳ ನಾಯಕರು ಒಂದಾಗಿ ಬೆರೆತು ಪಾಲ್ಗೊಂಡಿದ್ದನ್ನು ಪ್ರಸ್ತಾಪಿಸಿ, ಅವರು ಸಂತಸ ವ್ಯಕ್ತಪಡಿಸಿದರು.

ಜುಮಾ ಖುತ್ಬಾ ನಿರ್ವಹಿಸಿದ ಉಮರಾಬಾದ್ ಜಾಮಿಯ ದಾರುಸ್ಸಲಾಂ ಪ್ರೊಫೆಸರ್ ಶೈಖ್ ಅಬ್ದುಲ್ ಅಝೀಂ ಮದನಿ ಮಾತನಾಡಿ, ಮಸೀದಿಯ ಮಹತ್ವದ ಕುರಿತು ವಿವರಿಸಿದರು.

ಶೈಖ್ ಅಬ್ದುಲ್ ಗಫೂರ್ ಜಾಮಇ, ಶೈಖ್ ಅಬ್ದುರ್ರಝಾಕ್ ಜಾಮಇ ಸಹಿತ ಹಲವು ಉಲಮಾಗಳು ಪ್ರವಚನ ನೀಡಿದರು.

ಇದೇ ಸಂದರ್ಭ ನಡೆದ ದಾವಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಮೀಯತೆ ಅಹ್ಲೇ ಹದೀಸ್‌ನ ಹಲವು ಉಲಮಾಗಳು, ಎಸ್.ಕೆ.ಎಸ್.ಎಂ. ದಾವಾ ಕಾರ್ಯದರ್ಶಿ ಎಂ.ಜಿ.ಮುಹಮ್ಮದ್, ಕೆ.ಎಸ್.ಎ. ಪ್ರತಿನಿಧಿ ಶಾಕೀರ್ ಉಳ್ಳಾಲ ಹಾಗೂ ಇಬ್ರಾಹೀಂ ಖಲೀಲ್ ತಲಪಾಡಿ ಇಸ್ಲಾಮಿನ ಶ್ರೇಷ್ಠತೆಯ ಬಗ್ಗೆ ಮಾತನಾಡಿದರು.

ಜುಮಾ ನಮಾಝ್ ನಿಂದ ಮಗ್ರಿಬ್ ವರೆಗೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಕಡೆಗಳಿಂದ ಹಲವು ಜನರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News