ನೂತನ ವಿಜಯನಗರ ಜಿಲ್ಲೆ ಅಧಿಕೃತವಾಗಿ ಅಸ್ತಿತ್ವಕ್ಕೆ

Update: 2021-02-08 12:38 GMT

ಬೆಂಗಳೂರು, ಫೆ. 8: ಕರ್ನಾಟಕ ರಾಜ್ಯದ ಮೂವತ್ತೊಂದನೆ(31ನೆ)ಯ ನೂತನ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯ ಸರಕಾರ ಸೋಮವಾರ ನೂತನ ಜಿಲ್ಲೆಯ ಅಧಿಸೂಚನೆ ಹೊರಡಿಸಿದೆ.

ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ನೂತನ ಜಿಲ್ಲೆ ಸ್ಥಾಪಿಸಿದ್ದು, ಹೊಸಪೇಟೆ ನೂತನ ಜಿಲ್ಲಾ ಕೇಂದ್ರವಾಗಿರಲಿದೆ. ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ, ಹರಪ್ಪನಹಳ್ಳಿ ಸೇರಿದಂತೆ ಒಟ್ಟು ಆರು ತಾಲೂಕುಗಳನ್ನು ನೂತನ ಜಿಲ್ಲೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಕುರುಗೋಡು, ಸಿರಗುಪ್ಪ, ಕಂಪ್ಲಿ ಹಾಗೂ ಸಂಡೂರು ಸೇರಿದಂತೆ ಐದು ತಾಲೂಕುಗಳಿವೆ. ನೂತನ ಜಿಲ್ಲೆ ವಿಜಯನಗರ ಪೂರ್ವಕ್ಕೆ ಚಿತ್ರದುರ್ಗ ಮತ್ತು ಬಳ್ಳಾರಿ, ಪಶ್ಚಿಮಕ್ಕೆ ಗದಗ ಮತ್ತು ಹಾವೇರಿ, ಉತ್ತರಕ್ಕೆ ಕೊಪ್ಪಳ ಹಾಗೂ ದಕ್ಷಿಣಕ್ಕೆ ದಾವಣಗೆರೆ ಜಿಲ್ಲೆ ಹರಿಹರ ಸರಹದ್ದಿನಲ್ಲಿವೆ ಎಂದು ಕಂದಾಯ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ವಿ.ಟಿ.ರಾಜ್ಯಶ್ರೀ ಅಧಿಸೂಚನೆ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News