ಕಾಲೇಜಿನ ಮೇಲ್ಚಾವಣಿಯ ಪ್ಲಾಸ್ಟ್ರಿಂಗ್ ಗಾರೆ ಕುಸಿತ: ಮೂವರು ವಿದ್ಯಾರ್ಥಿಗಳಿಗೆ ಗಾಯ

Update: 2021-02-10 15:57 GMT

ಮೈಸೂರು,ಫೆ.10: ಮಹಾರಾಜ ಕಾಲೇಜಿನ ಮೇಲ್ಛಾವಣಿಯ ಪ್ಲಾಸ್ಟ್ರಿಂಗ್ ಗಾರೆ ಕುಸಿದು ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಕಾಲೇಜಿನ ಎಂಎಸ್ಸಿ ಕ್ರಿಮಿನಾಲಜಿ ವಿಭಾಗದ ತರಗತಿಯಲ್ಲಿ ಆಂತರಿಕ ನಿಬಂಧನೆಯ ಪರೀಕ್ಷೆ ನಡೆಯುತ್ತಿದ್ದ ವೇಳೆ ಮೇಲ್ಛಾವಣಿಯ ಪ್ಲಾಸ್ಟ್ರಿಂಗ್ ಗಾರೆ ಕುಸಿದು ಬಿದ್ದಿದೆ. ಈ ವೇಳೆ ವಿಶಾಲ್, ಯಶವಂತ್, ಸಲೀಂ ಎಂಬ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಛಾವಣಿ ಮೇಲ್ಭಾಗ ಶಿಥಿಲಗೊಂಡಿದ್ದರಿಂದ ದುರಸ್ತಿ ಕಾರ್ಯ ನಡೆಯುತ್ತಿತ್ತು. ದುರಸ್ತಿ ಕಾರ್ಯ ನಡೆಯುತ್ತಿರುವಾಗಲೇ ಕೆಳ ಭಾಗದಲ್ಲಿ ಛಾವಣಿ ಕುಸಿದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಪ್ರಾಂಶುಪಾಲರು ಸೇರಿದಂತೆ ಪ್ರಾಧ್ಯಾಪಕರು ಪರಿಶೀಲನೆ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News