ಆಟವಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಮೃತ್ಯು

Update: 2021-02-14 19:06 GMT

ಪಾಲಕ್ಕಾಡ್, ಫೆ.15: ಜಿಲ್ಲೆಯ ಕುಣಿಶ್ಶೇರಿ ಎಂಬಲ್ಲಿ ಒಂದೇ ಕುಟುಂಬದ ಮೂವರು ಸಹೋದರರು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.

ಕುದಿರೆಪ್ಪಾರ ನಿವಾಸಿ ಜಸೀರ್ ಎಂಬವರ 3, 7 ಮತ್ತು 12 ವರ್ಷದ ಮಕ್ಕಳು ಮೃತಪಟ್ಟವರಾಗಿದ್ದು, ಶನಿವಾರ ಆಟವಾಡುವ ವೇಳೆ ಕಾಲು ಜಾರಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಕುಣಿಶ್ಶೇರಿಯ ಕುದಿರೆಪ್ಪಾರ ಎಂಬಲ್ಲಿ ತೋಟದ ಮಧ್ಯೆ ಇರುವ ಕೊಳದಲ್ಲಿ ಘಟನೆ ಸಂಭವಿಸಿದೆ. ಮಾವಿನ ಹಣ್ಣು ತೊಳೆಯಲು 7 ವರ್ಷ ಪ್ರಾಯದ ರಿಂಶಾದ್ ಕೊಳಕ್ಕೆ ಇಳಿದಾಗ ಕಾಲು ಜಾರಿ ಬಿದ್ದಿದ್ದು, ಇದನ್ನು ನೋಡಿದ 3 ವರ್ಷ ಪ್ರಾಯದ ರಿಫಾಝ್ ಕೂಡಾ ಕೊಳಕ್ಕೆ ಇಳಿದಿದ್ದಾರೆ. ಇಬ್ಬರನ್ನೂ ರಕ್ಷಿಸಲು 12ರ ಹರೆಯದ ಜಿಂಶಾದ್ ಕೊಳಕ್ಕೆ ಹಾರಿದ್ದು, ಮೂವರೂ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಇವರೊಂದಿಗೆ ಆಟವಾಡುತ್ತಿದ್ದ 8 ವರ್ಷದ ಶೃತಿ ಎಂಬ ಬಾಲಕಿ ಈ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. 

ಜಸೀರ್- ರಮ್ಲಾ ದಂಪತಿಗೆ ಇದ್ದ ಈ ಮೂವರು ಮಕ್ಕಳೂ ಮೃತಪಟ್ಟಿದ್ದು, ಮೃತರನ್ನು ಆಲತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನಂತರ ಮೃತದೇಹಗಳನ್ನು ಆಲತ್ತೂರಿನ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತು. ಕೃಷಿ ಸಚಿವ ವಿ.ಎಸ್ ಸುನೀಲ್ ಕುಮಾರ್, ಆಲತ್ತೂರು ಶಾಸಕ ಕೆ.ಡಿ ಪ್ರಸನ್ನನ್ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News