ನಮ್ಮ ಹಳ್ಳಿ ಥಿಯೇಟರ್ ನಿಂದ 2020-21ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ

Update: 2021-02-16 18:37 GMT

ಶಿವಮೊಗ್ಗ, ಫೆ.16: ವಿವಿಧ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಶಿವಮೊಗ್ಗದ ಹವ್ಯಾಸಿ ಕಲಾತಂಡ, ನಮ್ಮ ಹಳ್ಳಿ ಥಿಯೇಟರ್ ಕೊಡಮಾಡುವ ಪ್ರಸಿದ್ಧ 2020-21ನೇ ಸಾಲಿನ ವಾರ್ಷಿಕ ಪ್ರಶಸ್ತಿ  ಈ ಕೆಳಕಂಡವರಿಗೆ ಲಭಿಸಿದೆ.

ರಂಗಭೂಮಿ ಸಾಧನೆಗಾಗಿ ಹಿರಿಯ ರಂಗಕರ್ಮಿ, ಸಾಹಿತಿ, ಬೆಂಗಳೂರಿನ ಎಸ್.ಎನ್ ಸೇತುರಾಂ, ಸಮಾಜ ಸೇವೆಗಾಗಿ ಡಾ.ಮಾನಸ ಟ್ರಸ್ಟ್ ನಿರ್ದೇಶಕ  ಶಿವಮೊಗ್ಗದ ರಜನಿ.ಎ.ಪೈ, ಹಾಗೂ ಯುವ ಸಾಹಿತಿ ನವೀನ್ ಕಮ್ಮರಡಿ, ಕೊಪ್ಪ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನಮ್ಮ ಹಳ್ಳಿ ಥಿಯೇಟರ್ ತಂಡದ ಅಧ್ಯಕ್ಷ ಪ್ರವೀಣ್ ಎಸ್. ಹಾಲ್ಮತ್ತೂರ್ ತಿಳಿಸಿದ್ದಾರೆ.

ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು ಸನ್ಮಾನ ಕಾರ್ಯಕ್ರಮವನ್ನು ಫೆ.28ರ ರವಿವಾರ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಸನ್ಮಾನ ಕಾರ್ಯಕ್ರಮದ ನಂತರ ಎಸ್.ಎನ್. ಸೇತುರಾಂ ರಚನೆ ಮತ್ತು ನಿರ್ದೇಶನದ ಸ್ತ್ರೀ ನಾಟಕ ಪ್ರದರ್ಶನಗೊಳ್ಳಲಿದ್ದು, ಮುಂಗಡ ಟಿಕೆಟ್ ಗಾಗಿ ಚೇತನ್ ರಾಯನಹಳ್ಳಿ: 95380 20367, ಮಂಜುನಾಥ ಸ್ವಾಮಿ 9845014229 ಸಂಪರ್ಕಿಸಲು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News