‘‘ನನ್ನ ಹೆಸರು ಸರ್ ಅಲ್ಲ’’: ರಾಹುಲ್ ಗಾಂಧಿ

Update: 2021-02-18 17:40 GMT

ಪುದುಚೇರಿ, ಫೆ. 18: ಇಲ್ಲಿನ ಭಾರತಿದಾಸನ್ ಮಹಿಳೆಯರ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳ ಗದ್ದಲದ ನಡುವೆ ಯುವ ವಿದ್ಯಾರ್ಥಿನಿಯೋರ್ವಳು ‘‘ಸಾರ್, ನಾನು ಇಲ್ಲಿದ್ದೇನೆ’’ ಎಂದು ಪ್ರಶ್ನೆ ಕೇಳಿದ ಸಂದರ್ಭ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘‘ನನ್ನ ಹೆಸರು ಸರ್ ಅಲ್ಲ’ ಎಂದು ಹೇಳಿದ ಘಟನೆ ನಡೆಯಿತು. ವಿದ್ಯಾರ್ಥಿಗಳ ಹರ್ಷೋದ್ಘಾರದ ನಡುವೆ ರಾಹುಲ್ ಗಾಂಧಿ ಅವರು, ‘‘ಕೇಳಿ. ನನ್ನ ಹೆಸರು ಸರ್ ಅಲ್ಲ. ನನ್ನ ಹೆಸರು ರಾಹುಲ್. ಆದುದರಿಂದ ದಯವಿಟ್ಟು ನನ್ನನ್ನು ರಾಹುಲ್ ಎಂದು ಕರೆಯಿರಿ’’ ಎಂದರು.

‘‘ನೀವು ನಿಮ್ಮ ಪ್ರಾಂಶುಪಾಲರ ಹಾಗೂ ಅಧ್ಯಾಪಕರನ್ನು ಸರ್ ಎಂದು ಕರೆಯಬಹುದು. ಆದರೆ, ನನ್ನನ್ನು ರಾಹುಲ್ ಎಂದು ಕರೆಯಿರಿ’’ ಎಂದು ಹೇಳಿದಾಗ ವಿದ್ಯಾರ್ಥಿಗಳು ಮತ್ತಷ್ಟು ಹರ್ಷೋದ್ಘಾರ ಮಾಡಿದರು. ಈ ಸಂವಹನದ ವೀಡಿಯೊವನ್ನು ಕಾಂಗ್ರೆಸ್ ಪಕ್ಷ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News