ಫೆ.28ರಂದು ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆ: ಪರಿಷ್ಕೃತ ಪ್ರವೇಶ ಪತ್ರ ಕಡ್ಡಾಯ

Update: 2021-02-21 12:58 GMT

ಬೆಂಗಳೂರು, ಫೆ. 21: ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಫೆ.28ಕ್ಕೆ ಮುಂದೂಡಲಾಗಿರುವ 2019ನೇ ಸಾಲಿನ ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯರ್ಥಿಗಳು ಪರಿಷ್ಕೃತ ಪ್ರವೇಶ ಪತ್ರ ಪಡೆಯುವುದು ಕಡ್ಡಾಯವಾಗಿದ್ದು, ಕೆಪಿಎಸ್ಸಿ ವೆಬ್‍ಸೈಟ್‍ನಿಂದ ಪ್ರವೇಶಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

ಅಭ್ಯರ್ಥಿಗಳು ಆಯೋಗದ ವೆಬ್ ಸೈಟ್ http://kpsc.kar.nic.in ನಲ್ಲಿ ಸಹಾಯಕರು, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಫೆ.28 (ರವಿವಾರಕ್ಕೆ) ಪರಿಷ್ಕೃತ ಪ್ರವೇಶ ಪತ್ರಗಳು ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ User Name & Password ಅನ್ನು ಉಪಯೋಗಿಸಿಕೊಂಡು ಪರಿಷ್ಕೃತ ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಲು ಫೆ.21 ರಿಂದ ಅವಕಾಶ ಕಲ್ಪಿಸಲಾಗಿದೆ.

ಜ.21ರ ಸ್ಪಾರ್ಧಾತ್ಮಕ ಪರೀಕ್ಷೆಗೆ ಜಾರಿಗೊಳಿಸಲಾಗಿದ್ದ ಪ್ರವೇಶ ಪತ್ರವನ್ನು ಈಗಾಗಲೇ ರದ್ದುಪಡಿಸಲಾಗಿದೆ. ಅದುದರಿಂದ, ಯಾವುದೇ  ಕಾರಣಕ್ಕೂ ಜ.24ರ ಪ್ರವೇಶ ಪತ್ರವನ್ನು ಸದರಿ ಸ್ಪರ್ಧಾತ್ಮಕ ಪರೀಕ್ಷೆಗೆ ಪರಿಗಣಿಸಲಾಗುವುದಿಲ್ಲ. ಫೆ.28ರ ಸ್ಮರ್ಧಾತ್ಮಕ ಪರೀಕ್ಷೆಗೆ ಜಾರಿಗೊಳಿಸಲಾದ ಪರಿಷ್ಕೃತ ಪ್ರವೇಶ ಪತ್ರಗಳೊಂದಿಗೆ ಮಾತ್ರ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು.

ಅಭ್ಯರ್ಥಿಗಳು ಪರೀಕ್ಷೆ ದಿನಕ್ಕಾಗಿ ಕಾಯದೇ ಮುಂಚಿತವಾಗಿಯೇ ಪರಿಷ್ಕೃತ ಪತ್ರವನ್ನು ಡೌನ್‍ಲೋಡ್ ಮಾಡಿಕೊಂಡು ಅದರ ಪ್ರಿಂಟ್ ತೆಗೆದುಕೊಳ್ಳಬೇಕು. ಪರೀಕ್ಷಾ ಉಪಕೇಂದ್ರ ಇರುವ ಸ್ಥಳವನ್ನು ಮುಂಚಿತವಾಗಿ ನೋಡಿಕೊಳ್ಳತಕ್ಕದ್ದು, ಪರಿಷ್ಕೃತ ಪ್ರವೇಶ ಪತ್ರದಲ್ಲಿ ನೀಡಿರುವ ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳನ್ನು ಓದಿಕೊಂಡು ತಪ್ಪದೇ ಅವುಗಳನ್ನು ಪಾಲಿಸತಕ್ಕದ್ದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಪ್ರವೇಶಪತ್ರಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ ಸಂಖ್ಯೆ :18005728707 ಹಾಗೂ ಆಯೋಗದ ಸಹಾಯವಾಣಿ ಸಂಖ್ಯೆ: 080-22356487/080-22268356 ಗೆ ಸಂಪರ್ಕಸುವಂತೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News