ಹೊಸದಿಲ್ಲಿ: 80 ಜನರಿಗೆ 8 ಕೋ. ರೂ. ವಂಚಿಸಿದ ವ್ಯಕ್ತಿಯ ಬಂಧನ

Update: 2021-02-21 14:58 GMT

ಹೊಸದಿಲ್ಲಿ, ಫೆ. 21: ಭಾರತದಾದ್ಯಂತ 80ಕ್ಕೂ ಅಧಿಕ ಜನರಿಗೆ 8 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ದಿಲ್ಲಿ ಪೊಲೀಸರು 41 ವರ್ಷದ ವ್ಯಕ್ತಿಯೋರ್ವನನ್ನು ರವಿವಾರ ಬಂಧಿಸಿದ್ದಾರೆ. ಈತ ಪೋಂಜಿ ಯೋಜನೆ ಎಂದು ಕರೆಯಲಾಗುವ ನಕಲಿ ಹೂಡಿಕೆ ಯೋಜನೆಯೊಂದಿಗೆ ನಂಟು ಹೊಂದಿದ್ದಾನೆ ಎಂದು ಹೇಳಲಾಗಿದೆ.

ಆರೋಪಿಯನ್ನು ಗೋಪಾಲ್ ದಳಪತಿ ಎಂದು ಗುರುತಿಸಲಾಗಿದೆ. ಈತನನ್ನು ಸಾಕೇತ್ ನ್ಯಾಯಾಲಯದ ಸಮೀಪ ಗುರುವಾರ ಬಂಧಿಸಲಾಗಿದೆ. ಈತ ನಕಲಿ ಯೋಜನೆಗಳಲ್ಲಿ ಹೂಡಿಕೆ ಮಾಡುವಂತೆ ಜನರಿಗೆ ಆಮಿಷ ಒಡ್ಡುತ್ತಿದ್ದ. ಅಲ್ಲದೆ, ಹೂಡಿಕೆ ಹಿಂದೆಗೆಯುವ ಸಂದರ್ಭ ಅತ್ಯಧಿಕ ಮೊತ್ತ ನೀಡುವ ಭರವಸೆ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೆಸರ್ಸ್ ಇನ್‌ಫ್ರಾಸ್ಟ್ರಕ್ಚರ್ ಕಾರ್ಪೋರೇಶನ್ ಲಿಮಿಟೆಡ್ ಆ್ಯಂಡ್ ವೆಯರ್ಡ್ ಇಂಡಸ್ಟ್ರೀಸ್ ಲಿಮಿಟೆಡ್ ಎಂದು ನೋಂದಣಿಯಾದ ಕಂಪೆನಿಯ ನಿರ್ದೇಶಕನಾಗಿ ಗೋಪಾಲ್ ದಳಪತಿ ಕಾರ್ಯ ನಿರ್ವಹಿಸುತ್ತಿದ್ದರು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News