72 ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್‍ಗಳಿಗೆ ಭಡ್ತಿ

Update: 2021-02-24 12:48 GMT

ಬೆಂಗಳೂರು, ಫೆ.24: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್‍ಸ್ಟೇಬಲ್ ಆಗಿ ಮೂರು ವರ್ಷ ಸೇವಾವಧಿ ಪೂರ್ಣಗೊಳಿಸಿದ 72 ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್‍ಗಳಿಗೆ ಹೆಡ್ ಕಾನ್‍ಸ್ಟೇಬಲ್ ಆಗಿ ಮುಂಭಡ್ತಿ ನೀಡಲಾಗಿದೆ.

ಈ ಸಂಬಂಧ ಕೆಎಸ್ಸಾಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಅವರು ಆದೇಶ ಹೊರಡಿಸಿದ್ದು, ರಾಜ್ಯ ಪೊಲೀಸ್ ಮೀಸಲು ಪಡೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 72 ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್‍ಗಳು ಭಡ್ತಿ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಕಾನ್‍ಸ್ಟೇಬಲ್ ಹುದ್ದೆಯಲ್ಲಿ ಕೇವಲ 3 ವರ್ಷ ಸೇವಾವಧಿ ಪೂರೈಸಿದ ಮಂಜುಳಾ ಬಿ.ಹುನಗುಂಡಿ ಅವರಿಗೆ ಹೆಡ್ ಕಾನ್‍ಸ್ಟೇಬಲ್ ಆಗಿ ಪದೋನ್ನತಿ ನೀಡಲಾಗಿದೆ. ಪೊಲೀಸ್ ಇಲಾಖೆಯಲ್ಲೇ ಪ್ರಥಮ ಬಾರಿಗೆ ಕಡಿಮೆ ವರ್ಷಗಳ ಸೇವಾವಧಿಯಲ್ಲಿ ಭಡ್ತಿ ಪಡೆದ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ಅದೇ ರೀತಿ, ಕೆಎಸ್ಸಾಆರ್ಪಿ 4ನೆ ಪಡೆಯ ಘಟಕದ ಮಹಿಳಾ ಸಿಬ್ಬಂದಿ ರಂಜಿತಾ ಮತ್ತು ಎಚ್.ಆರ್ ಅನಿತಾ ಎಂಬುವರು 24ನೆ ವರ್ಷಕ್ಕೆ ಹೆಡ್‍ಕಾನ್‍ಸ್ಟೇಬಲ್ ಆಗಿ ಪದೋನ್ನತಿ ಪಡೆದಿದ್ದಾರೆ. ಇನ್ನು, 3 ವರ್ಷ ಸೇವೆ ಪೂರೈಸಿದ ಒಬ್ಬ ಮಹಿಳಾ ಪೊಲೀಸ್ ಹಾಗೂ 4 ವರ್ಷ ಸೇವೆ ಪೂರೈಸಿದ 27 ಮಂದಿ ಮತ್ತು 5 ವರ್ಷ ಸೇವೆ ಪೂರೈಸಿದ 34 ಮಹಿಳಾ ಪೊಲೀಸರು ಸೇರಿ ಒಟ್ಟು 72 ಮಹಿಳಾ ಕಾನ್‍ಸ್ಟೇಬಲ್‍ಗಳಿಗೆ ಮುಂಭಡ್ತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News