60 ವರ್ಷ ಮೇಲ್ಪಟ್ಟವರಿಗೆ ಮಾ.1ರಿಂದ ಕೋವಿಡ್-19 ಲಸಿಕೆ: ಸಚಿವ ಡಾ.ಕೆ.ಸುಧಾಕರ್

Update: 2021-02-24 13:04 GMT

ಬೆಂಗಳೂರು, ಫೆ.24: ದೇಶಾದ್ಯಂತ ಮಾರ್ಚ್ 1ರಿಂದ ಕೋವಿಡ್-19 ಲಸಿಕೆಯ ಎರಡನೇ ಹಂತ ಆರಂಭವಾಗಲಿದ್ದು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು 45 ವರ್ಷ ಮೇಲ್ಪಟ್ಟು ಸಹ-ಅಸ್ವಸ್ಥತೆ ಹೊಂದಿರುವವರಿಗೆ 10,000 ಸರಕಾರಿ ಮತ್ತು 20,000 ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಸರಕಾರಿ ಕೇಂದ್ರಗಳಲ್ಲಿ ನೀಡುವ ಲಸಿಕೆ ಉಚಿತವಾಗಿರುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News