ಫೆ.26ರಿಂದ ಮಾ.5ರವರೆಗೆ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್

Update: 2021-02-24 18:34 GMT

ಮಡಿಕೇರಿ, ಫೆ.24: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಫೆ.26 ರಿಂದ ಮಾ.5ರ ವರೆಗೆ ವಿವಿಧ ಧಾರ್ಮಿಕ ಪ್ರವಚನ, ದ್ಸಿಕ್ರ್ ಹಲ್ಬಾ, ಖತಂ ದುಆ, ದುಆ ಮಜ್ಲಿಸ್ ನೊಂದಿಗೆ ವಿಜ್ರಂಭಣೆಯಿಂದ ನಡೆಯಲಿದೆ. 

ಫೆ.26ರಂದು ಎಮ್ಮೆಮಾಡು ಟಿಐಎಂಜೆ ಅಧ್ಯಕ್ಷ ಕೆ.ಎಸ್. ಅಬ್ದುಲ್ ಖಾದರ್ ಹಾಜಿ ಧ್ವಜಾರೋಣದ ಮೂಲಕ ಚಾಲನೆ ನೀಡಲಿದ್ದು, ಕೊಯಿಕೋಡ್‍ನ ಸಯ್ಯಿದ್ ಮುಹಮ್ಮದ್ ಕೋಯ ತಂಙಳ್ ಜಮಲುಲ್ಲೈಲಿ ಉರೂಸ್ ಉದ್ಘಾಟಿಸಲಿದ್ದಾರೆ. ರಾತ್ರಿ 8 ಗಂಟೆಗೆ ಮತ ಪ್ರವಚನ ನಡೆಯಲಿದ್ದು, ಪೇರೋಡ್ ಮುಹಮ್ಮದ್ ಅಝ್ಹರಿ ವಿಷಯ ಮಂಡನೆ ಮಾಡಲಿದ್ದಾರೆ. 

ಫೆ.27 ರಂದು ಸಯ್ಯಿದ್ ಸುಹೈಲ್ ಅಸ್ಸಖಾನ್ ಮಡಕ್ಕೆರ ಅವರ ನೇತೃತ್ವದಲ್ಲಿ ದಿಕ್ರ್ ಹಲ್ಖ ನಡೆಯಲಿದ್ದು, ಮಂಗಳೂರಿನ ಹಾಫಿಳ್ ಸುಫ್ಯಾನ್ ಸಖಾಫಿ ಪ್ರವಚನ ನೀಡಲಿದ್ದಾರೆ. ಫೆ.28 ರಂದು ಸಯ್ಯಿದ್ ಮುಹಮ್ಮದ್ ಮದನಿ ಆಲ್ ಬುಖಾರಿ ಮೊಗ್ರಾಲ್ ನೇತೃತ್ವದಲ್ಲಿ ಖತಂ ದುಆ ನಡೆಯಲಿದ್ದು, ರಾತ್ರಿ 8 ಗಂಟೆಗೆ ಎಮ್ಮೆಮಾಡಿನ ಖತೀಬ್ ಹಾಫಿಳ್ ಫಳ್ಲುರ್ರಹ್ಮಾನ್ ಸಖಾಫಿ ಪ್ರವಚನ ನೀಡಲಿದ್ದಾರೆ. 

ಮಾ.1 ರಂದು ಮಧ್ಯಾಹ್ನ 12 ಗಂಟೆಗೆ ಕಾಸರಗೋಡಿನ ಜಾಮಿಆ ಸೆಆದಿಯ್ಯ ಅಧ್ಯಕ್ಷ ಸಯ್ಯಿದ್ ಆಟಕೊಯ ತಂಙಳ್ ಕುಂಬೋಲ್ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ಸಮ್ಮೇಳನವನ್ನು ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಕರ್ನಾಟಕ ಮುಸ್ಲಿಂ ಜಮಾಅತ್‍ನ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸಅದಿ ಪಾಲ್ಗೊಳ್ಳಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಯಾಕುಬ್, ಕೊಡಗು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಬಿ ಗಣೇಶ್ ಸೇರಿದಂತೆ ಜಿ.ಪಂ ಸದಸ್ಯರು ಭಾಗವಹಿಸಲಿದ್ದಾರೆ. ರಾತ್ರಿ 8 ಗಂಟೆಗೆ ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಪ್ರವಚನ ನೀಡಲಿದ್ದಾರೆ.

ಮಾ.2 ರಂದು ರಾತ್ರಿ 8 ಗಂಟೆಗೆ ಅಬ್ದುಲ್ ಲತೀಫ್ ಸಆದಿ ಪಯಶ್ವಿ ಪ್ರವಚನ ಮಾಡಲಿದ್ದು, ಮಾ 3ರಂದು ಬೆಳಿಗ್ಗೆ ಖುರ್ರತುಸ್ಸಾದಾತ್ ಸಯ್ಯಿದ್ ಫಝರ್ ಕೊಯಮ್ಮ ತಂಙಳ್ ನೇತೃತ್ವದಲ್ಲಿ ದುಆ ಮಜ್ಲಿಸ್ ನಡೆಯಲಿದೆ. ರಾತ್ರಿ 8 ಗಂಟೆಗೆ ಅಬ್ದುಲ್ ಆಝೀಝ್ ಆಶ್ರಫಿ ವಿಷಯ ಮಂಡಣೆ ಮಾಡಲಿದ್ದಾರೆ. 

ಮಾ.4 ರಂದು ಮಗ್ರಿಬ್ ಬಳಿಕ ಎಮ್ಮೆಮಾಡು ಖತೀಬ್ ಹಾಫಿಳ್ ಫಳ್ಲುರ್ರಹ್ಮಾನ್ ಸಖಾಫಿ ನೇತೃತ್ವದಲ್ಲಿ ಸ್ವಲಾತುನ್ನಾರಿಯ ಮಜ್ಲಿಸ್ ನಡೆಯಲಿದ್ದು, ರಾತ್ರಿ 8 ಗಂಟೆಗೆ ಡಾ. ಮುಹಮ್ಮದ್ ಫಾರೂಖ್ ನಈಮಿ ಕೊಲ್ಲಂ ವಿಷಯ ಮಂಡಣೆ ಮಾಡಲಿದ್ದಾರೆ. 

ಕೊನೆಯ ದಿನವಾದ ಮಾ. 5 ರಂದು ಜುಮಾ ನಮಾಝ್ ಬಳಿಕ ಸಮಾರೋಪ ಸಮ್ಮೇಳನ ನಡೆಯಲಿದ್ದು, ಸಮ್ಮೇಳನವನ್ನು ಅಲ್ ಹಾಜ್ ಇ.ಕೆ. ಮಹ್ಮೂದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲ್ ಆಲ್ ಬುಖಾರಿ, ಕಡಲುಂಡಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News