ಘಾನ ತಲುಪಿದ 6 ಲಕ್ಷ ಉಚಿತ ಕೊರೋನ ವೈರಸ್ ಡೋಸ್

Update: 2021-02-24 18:42 GMT

ಅಕ್ರಾ (ಘಾನ), ಫೆ. 24: ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್-19 ಲಸಿಕಾ ಕಾರ್ಯಕ್ರಮ ‘ಕೋವ್ಯಾಕ್ಸ್’ ಮೂಲಕ ಉಚಿತವಾಗಿ ಹಂಚಿಕೆಯಾಗಿರುವ ಮೊದಲ ಡೋಸ್‌ಗಳು ಬುಧವಾರ ಘಾನವನ್ನು ತಲುಪಿವೆ.

ಶ್ರೀಮಂತ ಮತ್ತು ಬಡ ದೇಶಗಳಿಗೆ ಲಸಿಕೆಗಳು ಸಮಾನವಾಗಿ ಹಂಚಿಕೆಯಾಗುವುದನ್ನು ಖಾತರಿಪಡಿಸುವುದಕ್ಕಾಗಿ ಕಳೆದ ವರ್ಷದ ಎಪ್ರಿಲ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ‘ಕೋವ್ಯಾಕ್ಸ್’ ಕಾರ್ಯಕ್ರಮವನ್ನು ಆರಂಭಿಸಿತ್ತು.

ಈ ವರ್ಷದ ಕೊನೆಯ ವೇಳೆಗೆ, ತನ್ನ ಸದಸ್ಯ ದೇಶಗಳಿಗೆ 200 ಕೋಟಿ ಡೋಸ್ ಲಸಿಕೆಯನ್ನು ವಿತರಿಸುವುದಾಗಿ ಕೋವ್ಯಾಕ್ಸ್ ತಿಳಿಸಿದೆ.

ಘಾನ ‘ಕೋವ್ಯಾಕ್ಸ್’ ಕಾರ್ಯಕ್ರಮದಿಂದ ಕೋವಿಡ್-19 ಲಸಿಕೆಗಳನ್ನು ಪಡೆದ ಮೊದಲ ದೇಶವಾಗಿರುವುದಕ್ಕೆ ನಮಗೆ ಸಂತೋಷವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಜಂಟಿ ಹೇಳಿಕೆ ನೀಡಿದ ಯುನಿಸೆಫ್ ತಿಳಿಸಿದೆ.

ಆ್ಯಸ್ಟ್ರಝೆನೆಕ-ಆಕ್ಸ್‌ಫರ್ಡ್ ಲಸಿಕೆಯ 6 ಲಕ್ಷ ಡೋಸ್‌ಗಳನ್ನು ಯುನಿಸೆಫ್ ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯದಿಂದ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News