ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ಸ್ಪರ್ಧೆ: ತೇಜಸ್ವಿ ಯಾದವ್

Update: 2021-02-27 14:23 GMT

ಗುವಾಹಟಿ: ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷ ಸ್ಪರ್ಧಿಸಲಿದೆ ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಶನಿವಾರ ತಿಳಿಸಿದ್ದಾರೆ.

ತಾನು ಈಗಾಗಲೇ ಕಾಂಗ್ರೆಸ್ ನೊಂದಿಗೆ ಮಾತುಕತೆ ನಡೆಸಿದ್ದು, ಎಐಯುಡಿಎಫ್ ನೊಂದಿಗೆ ಮಾತನಾಡಿ ಮೈತ್ರಿಯನ್ನು ಅಂತಿಮಗೊಳಿಸುವೆ. ಸಮಾನ ಮನಸ್ಕ ಪಕ್ಷಗಳೊಂದಿಗೆ ನಾವು ಮಾತುಕತೆ ಮುಂದುವರಿಸಿದ್ದೇವೆ ಎಂದು ಗುವಾಹಟಿಗೆ ನೀಡಿದ ಮೊದಲ ಭೇಟಿಯ ವೇಳೆ ಸುದ್ದಿಗಾರರಿಗೆ ತೇಜಸ್ವಿ ತಿಳಿಸಿದರು.

ಆರ್ ಜೆಡಿ ಪಕ್ಷವು ಕಾಂಗ್ರೆಸ್ ಹಾಗೂ ಎಐಯುಡಿಎಫ್ ಅಲ್ಲದೆ ಇತರ ಸಣ್ಣಪುಟ್ಟ ಪಕ್ಷಗಳೊಂದಿಗೆ ಸಂಪರ್ಕದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News