ಪ.ಬಂಗಾಳ: ಚುನಾವಣಾ ದಿನಾಂಕ ಪ್ರಕಟಿಸಿದ ಮರುದಿನವೇ ಹಿರಿಯ ಪೊಲೀಸ್ ಅಧಿಕಾರಿಯನ್ನು ಬದಲಿಸಿದ ಚು.ಆಯೋಗ

Update: 2021-02-27 14:43 GMT

ಕೋಲ್ಕತಾ: ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯನ್ನು ಮಾರ್ಚ್ 27ರಿಂದ 8 ಹಂತಗಳಲ್ಲಿ ನಡೆಸಲಾಗುವುದು ಎಂದು ಪ್ರಕಟಿಸಿದ ಮರುದಿನವೇ ಚುನಾವಣಾ ಆಯೋಗವು ರಾಜ್ಯದ ಕಾನೂನು ಹಾಗೂ ಸುವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದ ಉನ್ನತ ಪೊಲೀಸ್ ಅಧಿಕಾರಿಯನ್ನು ಬದಲಿಸಿದೆ.

ಈ ಹಿಂದೆ ಅಗ್ನಿಶಾಮಕ ಸೇವೆಗಳಲ್ಲಿ ಡಿಜಿ ಆಗಿದ್ದ ಜಗ್ ಮೋಹನ್ ಅವರನ್ನು ನೂತನ ಎಡಿಜಿ ಹಾಗೂ ಐಜಿಪಿ(ಕಾನೂನು ಹಾಗೂ ಸುವ್ಯವಸ್ಥೆ)ಆಗಿ ನೇಮಿಸಲಾಗಿದ್ದು, ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ತಕ್ಷಣವೇ ಜಾರಿಗೆ ಬರುವಂತೆ ಜಾವೇದ್ ಶಮೀಮ್ ಅವರನ್ನು ಎಡಿಜಿ ಹಾಗೂ ಐಜಿಪಿ ಹುದ್ದೆಯಿಂದ ಬದಲಾಯಿಸಲಾಗಿದೆ. ಶಮೀಮ್ ಅವರು ಡಿಜಿ(ಅಗ್ನಿಶಾಮಕ ಸೇವೆಗಳು)ಆಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.

ಚುನಾವಣಾ ಹಿಂಸಾಚಾರ ಬಗ್ಗೆ ವಿರೋಧ ಪಕ್ಷವಾದ ಬಿಜೆಪಿ ಜೋರಾಗಿ ಧ್ವನಿ ಎತ್ತಿದ್ದ ಕಾರಣ  ರಾಜ್ಯದಲ್ಲಿ 8 ಹಂತಗಳ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ತಿಳಿಸಿತ್ತು.

ಈ ವಿಚಾರದ ಬಗ್ಗೆ ಬಿಜೆಪಿಯು ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದರಿಂದ ಮತದಾನವನ್ನು ವಿಸ್ತರಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಚುನಾವಣಾ ಆಯೋಗವು, ತನ್ನ ಪರಿಗಣನೆಯಲ್ಲಿ ಭದ್ರತೆಯು ಒಂದು ಪಾತ್ರವನ್ನು ವಹಿಸಲಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News