ರಾಜ್ಯದಲ್ಲಿಂದು 523 ಕೊರೋನ ಪ್ರಕರಣಗಳು ದೃಢ: ಆರು ಮಂದಿ ಮೃತ್ಯು

Update: 2021-02-27 16:43 GMT

ಬೆಂಗಳೂರು, ಫೆ. 27: ರಾಜ್ಯದಲ್ಲಿ ಶನಿವಾರ 523 ಮಂದಿಗೆ ಹೊಸದಾಗಿ ಕೊರೋನ ಸೋಂಕು ದೃಢಪಟ್ಟಿದ್ದು, 6 ಮಂದಿ ಅಸುನೀಗಿದ್ದು, 380 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,50,730ಕ್ಕೆ ತಲುಪಿದ್ದು, ಈವರೆಗೆ ಒಟ್ಟು ಸಾವಿನ ಸಂಖ್ಯೆ 12,326ಕ್ಕೆ ತಲುಪಿದೆ. ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ 5,638ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

ಸೋಂಕಿಗೆ 6 ಮಂದಿ ಬಲಿ: ಬೆಂಗಳೂರು ನಗರದಲ್ಲಿ 5 ಹಾಗೂ ಧಾರವಾಡದಲ್ಲಿ ಒಬ್ಬರು ಸೇರಿದಂತೆ ಒಟ್ಟು ಆರು ಮಂದಿ ಕೊರೋನ ಸೋಂಕಿನಿಂದ ಸಾವನ್ನಪ್ಪಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 523 ಪ್ರಕರಣಗಳು ದೃಢವಾಗಿದ್ದು, ಆ ಪೈಕಿ ಬಳ್ಳಾರಿ-10, ಬೆಳಗಾವಿ-13, ಬೆಂಗಳೂರು ಗ್ರಾಮಾಂತರ-5, ಬೆಂಗಳೂರು ನಗರ-329, ದಕ್ಷಿಣ ಕನ್ನಡ-21, ಮೈಸೂರು-31, ಉಡುಪಿ-18, ಕಲಬುರಗಿ-17 ಸೇರಿದಂತೆ ಒಟ್ಟು 523 ಮಂದಿಗೆ ಹೊಸದಾಗಿ ಕೊರೋನ ದೃಢಪಟ್ಟಿದೆ ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News