ಅಶ್ಲೀಲ ವೀಡಿಯೊ ಬಿಡುಗಡೆ ಮಾಡಿದ ದಿನೇಶ್ ಕಲ್ಲಹಳ್ಳಿ ವಿರುದ್ಧ ದೂರು ದಾಖಲು

Update: 2021-03-03 13:47 GMT

ಬೆಂಗಳೂರು, ಮಾ.3: ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವೀಡಿಯೊವನ್ನು ಬಿಡುಗಡೆ ಮಾಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡ ಪರ ಒಕ್ಕೂಟದಿಂದ ದಿನೇಶ್ ಕಲ್ಲಹಳ್ಳಿ ವಿರುದ್ಧ ದೂರು ದಾಖಲಿಸಲಾಗಿದ್ದು, ರಾಜಕೀಯ ಷಡ್ಯಂತ್ರದಿಂದ ಸಚಿವರ ತೇಜೋವಧೆ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿದೆ. 

ಯುವತಿಗೆ ಅನ್ಯಾಯವಾಗಿದ್ದರೆ ಅವರೇ ದೂರು ನೀಡಬೇಕಾಗಿತ್ತು. ದಿನೇಶ್ ಕಲ್ಲಹಳ್ಳಿ ಅವರು ಏಕೆ ದೂರು ನೀಡಿದ್ದಾರೆ? ಇದೊಂದು ಬ್ಲಾಕ್‍ಮೇಲ್ ತಂತ್ರಗಾರಿಕೆಯ ರಾಜಕಾರಣ ಎಂದು ಆರೋಪಿಸಿ ಕರ್ನಾಟಕ ಕನ್ನಡ ಪರ ಒಕ್ಕೂಟದ ಅಧ್ಯಕ್ಷ ಪುಟ್ಟೇಗೌಡ ದೂರು ನೀಡಿದ್ದಾರೆ.

ಎಡಿಟ್ ಮಾಡಿ ಒಬ್ಬರ ಮುಖವನ್ನು ಮತ್ತೊಬ್ಬರಿಗೆ ಜೋಡಿಸುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಿಗುತ್ತವೆ. ಅದೇ ರೀತಿಯಾಗಿ ರಮೇಶ್ ಜಾರಕಿಹೊಳಿ ಅವರ ಬಗ್ಗೆಯೂ ವಿಡಿಯೋ ಮಾಡಿರಬೇಕು. ಇಷ್ಟಕ್ಕೂ ಆ ದೃಶ್ಯವನ್ನು ನೋಡಿದರೆ ಸಮ್ಮತಿ ಲೈಂಗಿಕ ಕ್ರಿಯೆ ಥರ ಕಾಣುತ್ತಿದೆ. ಆದರೆ, ಇದನ್ನ ಬಳಸಿಕೊಂಡು ಸಚಿವರ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ. ದಿನೇಶ್ ಕಲ್ಲಹಳ್ಳಿಯನ್ನ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News