ರಾಮಮಂದಿರ ಸಂಕೀರ್ಣವನ್ನು ವಿಸ್ತರಿಸಲು ಇನ್ನಷ್ಟು ಜಾಗ ಖರೀದಿ ಮಾಡಿದ ದೇವಾಲಯ ಟ್ರಸ್ಟ್

Update: 2021-03-03 14:09 GMT

ಲಕ್ನೋ: ಅಯೋಧ್ಯೆಯ ರಾಮಮಂದಿರ ಸಂಕೀರ್ಣವನ್ನು ವಿಸ್ತರಿಸುವ ಸಲುವಾಗಿ 70 ಎಕರೆ ರಾಮ ಜನ್ಮಭೂಮಿ ಆವರಣದ ಪಕ್ಕದಲ್ಲಿರುವ 676.85 ಚದರ ಮೀಟರ್ ಭೂಮಿಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಂಗಳವಾರ ಖರೀದಿಸಿದೆ ಎಂದು ತಿಳಿದು ಬಂದಿದೆ. ಸಂಕೀರ್ಣದ ಪ್ರದೇಶವನ್ನು ವಿಸ್ತಾರವಾದ 107 ಎಕರೆಗೆ ವಿಸ್ತರಿಸುವ ಸಲುವಾಗಿ ದೇವಾಲಯದ ಟ್ರಸ್ಟ್ 1 ಕೋಟಿ ರೂ.ಗಳನ್ನು ನೀಡಿ ಸ್ಥಳ ಖರೀದಿಸಿದೆ.

ಸ್ಥಳೀಯ ಮೂಲಗಳ ಪ್ರಕಾರ, ದೇವಾಲಯದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಭೂಮಿಯ ಮಾಲಕರಾಗಿದ್ದ ಸ್ವಾಮಿ ದೀಪ ನಾರಾಯಣ್ ಅವರಿಂದ 1 ಕೋಟಿ ರೂ.ಗೆ ಜಮೀನನ್ನು ನೋಂದಣಿ ಮಾಡಿದ್ದಾರೆ. ಈ ಜಮೀನು ಪ್ರಸಿದ್ಧ ಆಶರ್ಫಿ ಭವನದ ಪಕ್ಕದಲ್ಲಿದೆ.

ಬಿಜೆಪಿಯ ಗೋಸಿಂಗಂಜ್ ಶಾಸಕ ಐಪಿ ತಿವಾರಿ ಮತ್ತು ದೇವಾಲಯದ ಟ್ರಸ್ಟ್ ಸದಸ್ಯ ಮತ್ತು ಆರ್‌ಎಸ್‌ಎಸ್ ಅಯೋಧ್ಯ ಪ್ರಚಾರಕ್ ಡಾ.ಅನಿಲ್ ಮಿಶ್ರಾ ಭೂ ವ್ಯವಹಾರಕ್ಕಾಗಿ ನೋಂದಾವಣೆ ಪತ್ರಗಳಿಗೆ ಸಹಿ ಹಾಕಿದ ಸಾಕ್ಷಿಗಳಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇವಾಲಯದ ಸಂಕೀರ್ಣ ಗಡಿಯಲ್ಲಿ ಏಕರೂಪತೆಯನ್ನು ತರಲು ಮತ್ತು ಭವ್ಯವಾದ ರಾಮಲಲ್ಲಾ ದೇವಾಲಯದ ವಿಸ್ತರಣೆಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಇದನ್ನು ಮಾಡಲಾಗುತ್ತಿದೆ ಎಂದು ಹಿರಿಯ ಟ್ರಸ್ಟ್ ಸದಸ್ಯರೊಬ್ಬರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News