19 ತಿಂಗಳ ಗೃಹಬಂಧನದಿಂದ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಬಿಡುಗಡೆ

Update: 2021-03-04 04:18 GMT

ಶ್ರೀನಗರ : ಆಲ್ ಪಾರ್ಟೀಸ್ ಹುರಿಯತ್ ಕಾನ್ಫರೆನ್ಸ್ (ಎಪಿಎಚ್‌ಸಿ) ಅಧ್ಯಕ್ಷ ಮಿರ್ವೈಝ್ ಉಮರ್ ಫಾರೂಕ್ ಅವರನ್ನು 19 ತಿಂಗಳ ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಬಳಿಕ 2019ರ ಆಗಸ್ಟ್‌ನಿಂದ ಫಾರೂಕ್ ಗೃಹಬಂಧನದಲ್ಲಿದ್ದರು.

ಶ್ರೀನಗರದ ಹಝ್ರತ್‌ಬಾಲ್ ಪ್ರದೇಶದ ನಿಗೀನ್‌ನಲ್ಲಿರುವ ತಮ್ಮ ನಿವಾಸದಿಂದ ಹೊರಗೆ ಓಡಾಡಲು ಫಾರೂಕ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. "ನಾನು ಸ್ವತಂತ್ರ್ಯ ವಕ್ತಿ ಎಂದು ತಿಳಿದು ಸಂತೋಷವಾಗುತ್ತಿದೆ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಆದರೆ ಫಾರೂಕ್ ಅವರ ಬಿಡುಗಡೆ ಬಗ್ಗೆ ಅಧಿಕೃತ ಆದೇಶ ಇನ್ನೂ ಕೈಸೇರಿಲ್ಲ ಎಂದು ಹುರಿಯತ್ ವಕ್ತಾರ ಸ್ಪಷ್ಟಪಡಿಸಿದ್ದಾರೆ. "ಸಮಾಜವನ್ನು ಅದರಲ್ಲೂ ಮುಖ್ಯವಾಗಿ ಯುವಜನತೆಯನ್ನು ಕಿತ್ತು ತಿನ್ನುತ್ತಿರುವ ಮಾದಕ ವ್ಯಸನದ ವಿರುದ್ಧದ ಅಭಿಯಾನವನ್ನು ತಾವು ಕೈಗೊಳ್ಳುವುದಾಗಿ ಫಾರೂಕ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News