"ಮೊಟೇರಾ ಸ್ಟೇಡಿಯಂಗೆ ನರೇಂದ್ರ ಮೋದಿಯ ಹೆಸರಿಟ್ಟಿರುವುದು ವಿಚಿತ್ರವಾದ ನಡೆ: ನಿರ್ಮಲಾ ಸೀತಾರಾಮನ್ ಪತಿ ಪರಕಲ ಪ್ರಭಾಕರ್

Update: 2021-03-04 11:50 GMT
photo: youtube.com/parakala prabhakar

ಹೊಸದಿಲ್ಲಿ: ಸರ್ದಾರ್‌ ಪಟೇಲ್‌ ರವರ ಹೆಸರಿನ ಬದಲು ಮೊಟೇರಾ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಮರುನಾಮಕರಣ ಮಾಡಿರುವ ಕುರಿತು  ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರವರ ಪತಿ ಪರಕಲ ಪ್ರಭಾಕರ್‌ ತಮ್ಮ ಯೂಟ್ಯೂಬ್‌ ಚಾನೆಲ್‌ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ತಮ್ಮ ಯೂಟ್ಯೂಬ್‌ ಚಾನೆಲ್‌ ನಲ್ಲಿ ವೀಡಿಯೋವನ್ನು ಪ್ರಕಟಿಸಿದ ಅವರು, "ಸರ್ದಾರ್‌ ಪಟೇಲ್‌ ರವರ ಹೆಸರಿನ ಬದಲು ಈಗಲೂ ಜೀವಂತವಿರುವ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನಿಟ್ಟಿರುವುದು ನಿಜಕ್ಕೂ ವಿಚಿತ್ರ ಮತ್ತು ವಿಲಕ್ಷಣ ನಡೆ. ಒಂದು ವಸಾಹತುಶಾಹಿ ಪರಂಪರೆಯನ್ನು ಕೊನೆಗೊಳಿಸುವ ಸಲುವಾಗಿ ಈಗ ಇರುವ ಹೆಸರನ್ನು ಮರುನಾಮಕರಣ ಮಾಡಲಾಗುತ್ತದೆ. ಅಂದರೆ, ಕಿಂಗ್‌ ಜಾರ್ಜ್‌ ಹಾಸ್ಪಿಟಲ್‌ ಕಸ್ತೂರ್ಬಾ ಹಾಸ್ಪಿಟಲ್‌ ಆಯ್ತು. ವೆಲ್ಲಿಂಗ್ಟನ್‌ ಆಸ್ಪತ್ರೆಯು ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಯಾಗಿ ರೂಪಾಂತರವಾಯಿತು. ಆದರೆ ಸರ್ದಾರ್‌ ಪಟೇಲರ ಹೆಸರನ್ನು ತೆಗೆದು ನರೇಂದ್ರ ಮೋದಿ ಹೆಸರನ್ನಿಟ್ಟಿದ್ದು ನಿಜಕ್ಕೂ ವಿಚಿತ್ರವಾಗಿದೆ" ಎಂದು ಅವರು ಹೇಳಿದ್ದಾರೆ.

"ಇದೇ ಉಪಾಯವನ್ನಿಟ್ಟುಕೊಂಡು ಇನ್ಯಾರೂ ಇಂತಹಾ ಸಾಹಸಕ್ಕೆ ಮುಂದಾಗದಿರಲಿ. ಒಬ್ಬ ವ್ಯಕ್ತಿಯು ಮನುಷ್ಯರ ಹೃದಯದಲ್ಲಿ ಉಳಿಯಬೇಕು. ಈಗ ಸರ್ದಾರ್‌ ಪಟೇಲರ ಹೆಸರು ಯಾವ ಸ್ಮಾರಕಕ್ಕೆ ಇಟ್ಟರೂ, ಇಡದಿದ್ದರೂ ಅವರ ನೆನಪುಗಳು ಭಾರತೀಯರ ಹೃದಯದಲ್ಲಿ ಉಳಿದಿದೆ. ಹಾಗಾಗಿ ನಾವು ಜನರ ಮನಸ್ಸಿನಲ್ಲಿ ಮೊದಲು ಸ್ಥಾನ ಪಡೆದುಕೊಳ್ಳಬೇಕು. ಸ್ಟೇಡಿಯಂಗೆ ಹೆಸರಿಟ್ಟ ತಕ್ಷಣ ನಮ್ಮ ಹೆಸರು ಅಜರಾಮರವಾಗಿ ಉಳಿಯುವುದಿಲ್ಲ" ಎಂಧು ವೀಡಿಯೋದಲ್ಲಿ ಅವರು ಉಲ್ಲೇಖಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News