ಕೊಪ್ಪಳ: ಬಿಇಒ ಸೇರಿ ಇಬ್ಬರು ಎಸಿಬಿ ಬಲೆಗೆ

Update: 2021-03-04 11:50 GMT

ಕೊಪ್ಪಳ, ಮಾ.4: ಶಾಲೆಯೊಂದರ ಠೇವಣಿ ಮೊತ್ತ ಹಿಂತಿರುಗಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ದ್ವಿತೀಯ ದರ್ಜೆ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸಮೀಪದ ಭಾಗ್ಯನಗರದ ಎಸ್‍ಎಸ್‍ಕೆ ಶಾಲೆ ಬಂದ್ ಆಗಿತ್ತು. ಅದರ ಠೇವಣಿ ಹಣವನ್ನು ನೀಡುವಂತೆ ಶಾಲೆಯ ರಾಮಮೂರ್ತಿ(ಹೆಸರು ಬದಲಾಯಿಸಲಾಗಿದೆ) ಎನ್ನುವವರು ಮನವಿ ಮಾಡಿದ್ದರು.

ಆದರೆ, ಇದಕ್ಕಾಗಿ 3,500 ಸಾವಿರ ರೂ. ಲಂಚದ ಹಣಕ್ಕೆ ಬಿಇಒ ಉಮಾದೇವಿ ಸೊನ್ನದ, ಎಸ್‍ಡಿಎ ಆರುಂಧತಿ ಎಂಬುವವರು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ರಾಮಮೂರ್ತಿ ಎಸಿಬಿಗೆ ದೂರು ನೀಡಿದ್ದರು. ಇದರ ಅನ್ವಯ ಆರೋಪಿಗಳು ಹಣ ಪಡೆಯುವ ವೇಳೆ ಎಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿ ಪ್ರಕರಣ ಭೇದಿಸಿದ್ದಾರೆ.

ಅಲ್ಲದೆ, 2002ರಲ್ಲಿ ಆರಂಭವಾಗಿದ್ದು 2009ರಲ್ಲಿ ಬಂದ್ ಆಗಿತ್ತು. ಶಾಲೆಯ ಆಡಳಿತ ಮಂಡಳಿ ಇಲಾಖೆಯಲ್ಲಿ ಇರಿಸಲಾಗಿದ್ದ ಡಿಪಾಜಿಟ್ ಮೊತ್ತವನ್ನು ಹಿಂದಿರುಗಿಸಲು ಕೇಳಿಕೊಂಡಿದ್ದರು. ಆದರೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಹಣ ನೀಡಿದ್ದಿಲ್ಲ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಎಸಿಬಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News