ವರದಕ್ಷಿಣೆಗಾಗಿ ಕಿರುಕುಳ ಪ್ರಕರಣ: ಆರೋಪಿಗಳಿಗೆ ಶಿಕ್ಷೆ

Update: 2021-03-04 13:21 GMT

ಶಿವಮೊಗ್ಗ: ವರದಕ್ಷಿಣೆಗಾಗಿ ಕಿರುಕುಳ ನೀಡಿದ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಶಿವಮೊಗ್ಗದ ೨ನೇ ಜೆ.ಎಮ್.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಅಂಬಣ್ಣರವರು ತೀರ್ಪು ಪ್ರಕಟಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಕುಸ್ಕೂರು ಗ್ರಾಮದ ವಾಸಿಗಳಾದ ವೆಂಕಟೇಶ್‌ನಾಯ್ಕ ಮತ್ತು ಚಿನ್ನಯ್ಯನಾಯ್ಕ ಶಿಕ್ಷೆಗೊಳಪಟ್ಟವರು.
ವೆಂಕಟೇಶ್‌ನಾಯ್ಕ ಮತ್ತು ಚಿನ್ನಯ್ಯನಾಯ್ಕ ಎಂಬುವವರು ಶಾರದ ಸೀತಾಬಾಯಿಯವರಿಗೆ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದರು.ವಿಚಾರಣೆ ನಡೆಸಿದ ನ್ಯಾಯಾಲಯ ಮಾ. ೦೨ ರಂದು ಶಿವಮೊಗ್ಗ ೨ನೇ ಜೆ.ಎಮ್.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಅಂಬಣ್ಣರವರು ಆರೋಪಿಗಳಿಗೆ ಕಲಂ: ೪೯೮(ಎ)ಐಪಿಸಿ ಅಪರಾಧಕ್ಕೆ ತಲಾ ಒಂದು ವರ್ಷ ಸಾದಾ ಸಜೆ ಶಿಕ್ಷೆ ಹಾಗೂ ತಲಾ ರೂ. ೧,೦೦೦ ಗಳ ದಂಡ ಹಾಗೂ  ಕಲಂ:೩೫೪ ಐಪಿಸಿ ಅಪರಾಧಕ್ಕೆ ತಲಾ ಒಂದು ವರ್ಷದ ಸಾದಾ ಸಜೆ ಶಿಕ್ಷೆ, ಕಲಂ:೩೨೪ ಐಪಿಸಿ ಅಪರಾಧಕ್ಕೆ ತಲಾ ಆರು ತಿಂಗಳು ಸಾದಾ ಸಜೆ ಶಿಕ್ಷೆ ಹಾಗೂ ತಲಾ ರೂ. ೫೦೦ ದಂಡವನ್ನು ವಿಧಿಸಿದ್ದಾರೆ. ನೊಂದ ಮಹಿಳೆ  ಶಾರದಾ ಸೀತಾಬಾಯಿರವರಿಗೆ ರೂ. ೧೦,೦೦೦ ಹಣವನ್ನು ಪರಿಹಾರವಾಗಿ ನೀಡತಕ್ಕದ್ದೆಂದು ಆದೇಶಿಸಿ ತೀರ್ಪು ನೀಡಿದ್ದಾರೆ.

ಅಭಿಯೋಜನೆಯ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಜಿ.ಕೆ. ಕಿರಣ್ ಕುಮಾರ್ ಇವರು ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News