ರೈತ ಮಹಾ ಪಂಚಾಯತ್ ಕಚೇರಿಯ ಉದ್ಘಾಟನೆ: ಬೃಹತ್ ಆಂದೋಲನಕ್ಕೆ ಪೂರ್ವಭಾವಿ ಸಿದ್ಧತೆ

Update: 2021-03-04 17:04 GMT

ಶಿವಮೊಗ್ಗ: ನಗರದ ದುರ್ಗಿಗುಡಿಯ ರತ್ನಮ್ಮ ಮಾದವರಾವ್ ರಸ್ತೆಯಲ್ಲಿರುವ ಹೆಚ್.ಎಂ. ಸರ್ವಿಸ್ ಸ್ಟೇಷನ್ ಆವರಣದಲ್ಲಿ ರೈತ ಮಹಾ ಪಂಚಾಯತ್ ಕಛೇರಿಯ ಉದ್ಘಾಟನೆಯನ್ನು ರೈತ ನಾಯಕರಾದ ಹೆಚ್.ಆರ್. ಬಸವರಾಜಪ್ಪ ಮತ್ತು ಕೆ.ಟಿ. ಗಂಗಾಧರ್ ನೆರವೇರಿಸಿದರು.

ಜಿಲ್ಲೆಯ ಶಿಕಾರಿಪುರ-ಸೊರಬದಲ್ಲಿ ಈಗಾಗಲೇ ಕಚೇರಿ ಉದ್ಘಾಟನೆಯಾಗಿದ್ದು, ಇದು ಮೂರನೇ ಕಚೇರಿಯಾಗಿದೆ.

ಮಾ.20ರ ಶನಿವಾರ ಸಂಜೆ 4 ಗಂಟೆಗೆ ನಗರದ ಸೈನ್ಸ್ ಮೈದಾನದಲ್ಲಿ ದೆಹಲಿಯ ಹೋರಾಟನಿರತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರು ಶಿವಮೊಗ್ಗಕ್ಕೆ ಆಗಮಿಸಲಿದ್ದು, ರೈತ ಮಹಾಪಂಚಾಯತ್ ಸಮಾವೇಶಕ್ಕೆ ಪೂರ್ವಭಾವಿಯಾಗಿ ಇಂದು ನೂತನ ಕಛೇರಿಯಲ್ಲಿ ವಿವಿಧ ಸಂಘಟನೆಗಳು ನಾಯಕರು ಸೇರಿ ಕಾರ್ಯಕ್ರಮಕ್ಕೆ ರೂಪುರೇಷೆಯನ್ನು ಸಿದ್ಧಪಡಿಸಿದರು.

ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ನಡೆಯುತ್ತಿರುವ ರೈತ ಚಳವಳಿಗೆ ಬೆಂಬಲವಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಈ ಸಮಾವೇಶ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್, ಪ್ರಮುಖರಾದ ಶ್ರೀಪಾಲ್, ಕೆ.ಎಲ್.ಅಶೋಕ್, ಎನ್.ರಮೇಶ್, ಡಿ.ಎಸ್.ಎಸ್. ನ ಗುರುಮೂರ್ತಿ, ಹಾಲೇಶಪ್ಪ, ಹೆಚ್.ಸಿ.ಯೋಗೀಶ್, ಪಾಲಾಕ್ಷಿ, ವೀರೇಶ್, ಚಂದ್ರಶೇಖರ್ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News