ಮಂಜುನಾಥ್ ಚಾಂದ್, ಬಸವರಾಜ ಸಬರದ, ಎಚ್.ಎಸ್.ಅನುಪಮಾರಿಗೆ ಬರಗೂರು ಪ್ರಶಸ್ತಿ

Update: 2021-03-04 14:53 GMT

ಬೆಂಗಳೂರು, ಮಾ.4: ಹಿರಿಯ ಪತ್ರಕರ್ತ ಮಂಜುನಾಥ್ ಚಾಂದ್ ಸೇರಿ ಮೂವರಿಗೆ 2020ರ ಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ ಲಭಿಸಿದೆ. ವಿಚಾರ ಸಾಹಿತ್ಯ, ವಿಮರ್ಶೆ ಮತ್ತು ಕಾದಂಬರಿ ಪ್ರಕಾರಗಳಿಗೆ ನೀಡುವ ಪ್ರಶಸ್ತಿ ಇದಾಗಿದೆ.

ಮಂಜುನಾಥ್ ಚಾಂದ್ ಅವರ ಕಾಡ ಸೆರಗಿನ ಸೂಡಿ(ಕಾದಂಬರಿ), ಡಾ. ಎಚ್.ಎಸ್.ಅನುಪಮಾ ಅವರ ಹೆಣ್ಣು ಹೆಜ್ಜೆ(ವಿಚಾರ ಸಾಹಿತ್ಯ), ಡಾ. ಬಸವರಾಜ ಸಬರದ ಅವರ ಬಯಲು ಬೆಳಕು(ವಿಮರ್ಶೆ) ಪ್ರಶಸ್ತಿಗೆ ಆಯ್ಕೆಯಾಗಿವೆ.

ಕನ್ನಡ ಸಾಹಿತ್ಯ ಪರಿಷತ್‍ನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಮಾ.12ರಂದು ಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ ಸಮಾರಂಭ ಜರುಗಲಿದೆ. ಪ್ರಶಸ್ತಿಯು ತಲಾ 10 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿರಲಿದೆ.

ನಾಡೋಜ ಡಾ. ಬರಗೂರು ಪ್ರತಿಷ್ಠಾನವು ಬರಗೂರು ರಾಮಚಂದ್ರಪ್ಪ ಅವರ ದಿವಂಗತ ಪತ್ನಿಯವರ ನೆನಪಿನಲ್ಲಿ ಪ್ರತಿವರ್ಷ ಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News