ಗುಡಿಸಲು ಮುಕ್ತ ರಾಜ್ಯವಾಗಿಸುವುದು ನಮ್ಮ ಗುರಿ: ಕೆ. ರವೀಂದ್ರ ಶೆಟ್ಟಿ

Update: 2021-03-04 16:57 GMT

ಕೋಲಾರ: ಕರ್ನಾಟಕ ರಾಜ್ಯದಲ್ಲಿ ಅರೆ ಅಲೆಮಾರಿ ಮತ್ತು ಅಲೆಮಾರಿ ಜನಾಂಗಗಳು ಹಿಂದುಳಿದಿದ್ದು, ಇವರು ಹೆಚ್ಚಾಗಿ ಗುಡಿಸಲುಗಳಲ್ಲಿ ವಾಸಿಸುತ್ತಿದ್ದು, ಇವರೆಲ್ಲರಿಗೂ ವಿವಿಧ ಯೋಜನೆಗಳಡಿ ವಸತಿ ಸೌಲಭ್ಯಗಳನ್ನು ಕಲ್ಪಿಸಿ ರಾಜ್ಯವನ್ನು ಗುಡಿಸಲು ಮುಕ್ತಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಕರ್ನಾಟಕ ಅಲೆಮಾರಿ ಅಥವಾ ಅರೆ ಅಲೆಮಾರಿ ಅಭಿವೃದ್ಧಿ, ನಿಗಮದ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಅವರು ತಿಳಿಸಿದರು.

ಇಂದು ಪ್ರವಾಸಿ ಮಂದಿರ ಕೋಲಾರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರು ಸುಮಾರು ಒಂದು ಲಕ್ಷದಷ್ಟಿದ್ದು, ನಿಗಮದಡಿಯಲ್ಲಿ 46 ಜಾತಿಗಳಿವೆ. ಅತೀ ಹೆಚ್ಚಾಗಿ ಗೊಲ್ಲ ಅಥವಾ ಯಾದವ ಜನಾಂಗದವರಿದ್ದು ಇವರಿಗೆ ಶೇ. ೫೦ ರಷ್ಟು ನಿಗಮದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಉಳಿದ ೪೫ ಜಾತಿಗಳಿಗೆ ಶೇ ೫೦ ರಷ್ಟು ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಲಭ್ಯ ವಿರುವ ಜಾತಿಗಳು ಪಿಚ್ಚಗುಂಟ್ಲ, ಹೆಳವ, ಗೋಂಧಳಿ, ಬೈರಾಗಿ, ಗಾರುಡಿ ಜನಾಂಗದವರಿರುತ್ತಾರೆ. ಇನ್ನುಳಿದ ಜನಾಂಗದವರು ಈ ಜಿಲ್ಲೆಯಲ್ಲಿ ಲಭ್ಯವಿರುವುದಿಲ್ಲ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ೨೦೧೩-೧೪ ನೇ ಸಾಲಿನಿಂದ ಈವರೆಗೆ ವಿವಿಧ ಯೋಜನೆಯಡಿ ಒಟ್ಟು ೮೧೧ ಫಲಾನುಭವಿಗಳಿಗೆ ೪೪೭.೯೫ ಲಕ್ಷ ರೂ. ಆರ್ಥಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಒಟ್ಟಾರೆ ಈ ಸಮುದಾಯಕ್ಕೆ ಜಿಲ್ಲೆಯಲ್ಲಿ ಸುಮಾರು ೧೫೦ ಎಕರೆ ಜಮೀನುಗಳಗೆ ಗಂಗಾ ಕಲ್ಯಾಣ ಯೋಜನೆಯಡಿ ನೀರಾವರಿ ಸೌಲಭ್ಯವನ್ನು ಒದಗಿಸಲಾಗಿದೆ. ನಿಗಮದಿಂದ ಒಂದು ಕುಟುಂಬಕ್ಕೆ ಒಂದು ಬಾರಿ ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

ಈ ಜನಾಂಗಗಳ ಹೆಚ್ಚಿನ ಅಭಿವೃದ್ಧಿಗಾಗಿ ೨೦೨೦-೨೧ನೇ ಸಾಲಿನಲ್ಲಿ ಪ್ರತ್ಯೇಕ ನಿಗಮವನ್ನು ಸರ್ಕಾರ ಪ್ರಾರಂಭಿಸಲಾಗಿದೆ. ಜಿಲ್ಲೆಗೆ ಈ ಸಾಲಿಗೆ ನೀಡಿದ ಅನುದಾನದಲ್ಲಿ ಒಟ್ಟು ೧೧೦ ಪಾಲನುಭಾವಿಗಳಿಗೆ ೬೬.೬೮ ಲಕ್ಷ ರೂ. ಆರ್ಥಿಕ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳು ಒಗ್ಗಟ್ಟಾಗಿ ಸಂಘಟಿತಗೊಳ್ಳಬೇಕು. ಅವರಿಗೆ ದೊರೆಯಬೇಕಾದ ಮೂಲಭೂತ ಸೌಕರ್ಯಗಳು ಮತ್ತು ಸದು ಪಯೋಗ ಮಾಡಿಕೊಳ್ಳಬೇಕು. ೪೬ ಸಮುದಾಯಗಳ ಪೂರ್ತಿ ಸಂರ್ವಾಗಿಣ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ೨೦೨೧-೨೨ನೆ ಸಾಲಿನ ಬಜೆಟ್‌ನಲ್ಲಿ ೨೫೦ ಕೋಟಿ ಅನುದಾನವನ್ನು ನಿಗಮಕ್ಕೆ ನೀಡಲು ಮನವಿ ಮಾಡಲಾಗಿದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ರಾಜಣ್ಣ ಅವರು ಮಾತನಾಡಿ ಕಳೆದ ವರ್ಷ ಹಿಂದುಳಿದ ವರ್ಗಗಳಿಂದ ವಸತಿ ಸೌಲಭ್ಯಕ್ಕಾಗಿ ೧೪೬ ಅರ್ಜಿಗಳು ಬಂದಿದ್ದು, ಇದರಲ್ಲಿ ೧೨೨ ಪಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಅದರ ಹಿಂದಿನ ವರ್ಷ ೨೫೮ ಅರ್ಜಿಗಳು ಬಂದಿದ್ದು ಎಲ್ಲಾ ಪಲಾ ನುಭವಿಗಳಿಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಕಾದ ಗಣೇಶ್, ಮುಖಂಡರಾದ ಡಾ. ವೇಣುಗೋಪಾಲ್ ಹಾಗೂ ಮುಖಂಡರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News