ಆಧುನಿಕ ಯುಗದ ಗ್ರಾಫಿಕ್ ಗೆ ಹೆದರಿ ಕೋರ್ಟ್ ಮೊರೆ ಹೋಗಲಾಗಿದೆ: ಸಚಿವ ಸಿ.ಪಿ.ಯೋಗೇಶ್ವರ್

Update: 2021-03-07 15:42 GMT

ಮೈಸೂರು,ಮಾ.7: ಇದು ಗ್ರಾಫಿಕ್ ಯುಗ. ಏನು ಬೇಕಾದರೂ ಮಾಡಬಹುದು. ಹಾಗಾಗಿ ಮಾನಮರ್ಯಾದೆಗಗೆ ಹೆದರಿ ಕೋರ್ಟ್ ಮೊರೆ ಹೋಗಲಾಗಿದೆ ಎಂದು ಪ್ರವಾಸೋಧ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಏನೂ ಬೇಕಾದರೂ ಮಾಡಬಹುದು. ದೃಶ್ಯ ಮಾಧ್ಯಮಗಳನ್ನು ತಿರುಚುವ ಧ್ವನಿ ನೀಡುವ ಕೆಲಸ ಆಗುತ್ತಿದೆ. ಗ್ರಾಫಿಕ್ ಮೂಲಕ ಕೈ ಕಾಲು ತಲೆ ಕತ್ತರಿಸಿದಂತೆ ಮಾಡಬಹುದು. ನಾನು ಸಿನಿಮಾದಿಂದ ಬಂದವನು. ನನಗೆ ಅದೆಲ್ಲಾ ಗೊತ್ತಿದೆ. ಮಾನ ಮರ್ಯಾದೆ ಗೌರವಕ್ಕಾಗಿ ಕೋರ್ಟ್ ಮೊರೆ ಹೋಗಲಾಗಿದೆ ಎಂದರು.

ಸುಳ್ಳು ಬೇಗ ಹರಡುತ್ತದೆ. ಅದು ಸುಳ್ಳು ಎಂದು ಸಾಬೀತಾಗಲು ಸಮಯ ಬೇಕು. ಆದರೆ, ಮಾಧ್ಯಮದಲ್ಲಿ ಬಂದ ಕೂಡಲೇ ಅದನ್ನು ಜನ ನಂಬುತ್ತಾರೆ. ಆದರೆ ಸತ್ಯ ಹೊರಬರುವುದು ಪೊಲೀಸ್ ತನಿಖೆ, ನ್ಯಾಯಾಲಯದ ಮೂಲಕ, ಅದಕ್ಕಾಗಿ ನಾವೆಲ್ಲಾ ಭಯಪಡುತ್ತಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News