ಮಹಿಳೆಯರ ದುಡಿಮೆಗೆ ಪ್ರೋತ್ಸಾಹ ಅಗತ್ಯ: ಡಾ.ಸ್ನೇಹ ರಾಕೇಶ್

Update: 2021-03-07 19:06 GMT

ಬೆಂಗಳೂರು, ಮಾ.7: ಮಹಿಳೆಯರ ದಣಿವರಿಯದ ದುಡಿಮೆಗೆ ಪ್ರೋತ್ಸಾಹ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಸಮಗ್ರಾಭಿವೃದ್ಧಿ ಸಂಸ್ಥೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಮಗ್ರಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕಿ ಡಾ.ಸ್ನೇಹ ರಾಕೇಶ್ ತಿಳಿಸಿದ್ದಾರೆ.

ನಗರದ ಪ್ರೆಸ್‍ಕ್ಲಬ್‍ನಲ್ಲಿ ಸಮಗ್ರಾಭಿವೃದ್ಧಿ ಸಂಸ್ಥೆ, ಆರ್‍ವಿಜಿ ಫೌಂಡೇಷನ್ ಹಾಗೂ ಅಕರ್‍ಮ್ಯಾಕ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ 100 ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊರೋನ ಸಂದರ್ಭದಲ್ಲಿ ಮಹಿಳಾ ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌಕ ಕಾರ್ಮಿಕರು, ವೈದ್ಯರು ಅಹರ್ನಿಶಿ ಕಾರ್ಯ ನಿರ್ವಹಿಸಿದ್ದಾರೆ. ಅವರಿಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ದೊರೆತಿಲ್ಲ. ಅಂತೆಯೇ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಎಲೆಮರಿಯ ಕಾಯಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹವರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸಮಗ್ರಾಭಿವೃದ್ಧಿ ಸಂಸ್ಥೆಯು ಈ ವರ್ಷದಿಂದ ಮಾಡುತ್ತಿದೆ. ಇದು ಮುಂದಿನ ವರ್ಷಗಳಲ್ಲಿಯೂ ಮುಂದುವರಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಹಿಳೆಯು ತಾಯಿಯಾಗಿ, ಸಹೋದರಿ, ಸ್ನೇಹಿತೆ, ಮಡದಿಯಾಗಿ ನಾನಾ ಆಯಾಮಗಳಲ್ಲಿ ಅನಾದಿ ಕಾಲದಿಂದಲೂ ಪುರುಷನಿಗೆ ಹೆಗಲಾಗಿ ಆತನ ಯಶಸ್ವಿಗೆ ಕಾರಣಕರ್ತಳಾಗಿದ್ದಾಳೆ. ಕುಟುಂಬಕ್ಕಾಗಿ ತಮ್ಮ ಜೀವವನ್ನೇ ಸವೆಸುತ್ತಿರುವ ಪ್ರತಿ ಮಹಿಳೆಯೂ ಸಾಧಕಿಯಾಗಿದ್ದಾಳೆ ಎಂದು ಅವರು ತಿಳಿಸಿದ್ದಾರೆ.

100 ಮಂದಿ ಮಹಿಳಾ ವೈದ್ಯರು, ಪಿಲೀಸ್, ಚಾಲಕರು, ಪೌರಕಾರ್ಮಿಕರು, ಸಂಗೀತ, ಇತರ ಕ್ಷೇತ್ರದ ಸಾಧಕಿಯರನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ವೈದ್ಯೆ ಡಾ.ದಿಶಾ, ಡಾ.ಪದ್ಮಾವತಿ, ಪೊಲೀಸ್ ಶಿಲ್ಪಾ, ನಟಿ ಸಂಚಿತಾ ಹೆಗ್ಡೆ, ಗಾಯಕಿಯರಾದ ಗಾನವಿ, ಹರ್ಷ ರಂಜನಿ, ಶಶಿಕಲಾ ಮತ್ತಿತರರು ಪ್ರಶಸ್ತಿ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News