ಕೆಪಿಎಸ್ಸಿ: ಎಸ್‍ಡಿಎ ಹಾಗೂ ಕಿರಿಯ ಸಹಾಯಕರ ಪರೀಕ್ಷೆ ಮುಂದೂಡಿಕೆ

Update: 2021-03-10 13:49 GMT

ಬೆಂಗಳೂರು, ಮಾ.10: ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಮೂಲಕ ಮಾ.20 ಹಾಗೂ 21ರಂದು 2019ನೆ ಸಾಲಿನ ದ್ವಿತೀಯ ದರ್ಜೆ ಸಹಾಯಕ(ಎಸ್‍ಡಿಎ) ಹಾಗೂ ಕಿರಿಯ ಸಹಾಯಕರ ಹುದೆಗಳಿಗೆ ಸಂಬಂಧಿಸಿದಂತೆ ನಡೆಸಬೇಕಾಗಿದ್ದ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಪರೀಕ್ಷೆಗಳ ಪರಿಷ್ಕೃತ ದಿನಾಂಕದ ವೇಳಾಪಟ್ಟಿಯನ್ನು ಶೀಘ್ರವಾಗಿ ಪ್ರಕಟಿಸಲಾಗುವುದು ಎಂದು ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ ತಿಳಿಸಿದ್ದಾರೆ.

ಜ.24ರಂದು ಆಯೋಗದಿಂದ ನಡೆಯಬೇಕಾಗಿದ್ದ ಪ್ರಥಮ ದರ್ಜೆ ಸಹಾಯಕರು/ಸಹಾಯಕರು ಹುದ್ದೆಗಳ ಪರೀಕ್ಷೆಗಳನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಿ, ಫೆ.28ರಂದು ನಡೆಸಲಾಗಿರುವುದರಿಂದ, ಕಿರಿಯ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಪರೀಕ್ಷೆಗಳ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲು ಆಯೋಗಕ್ಕೆ ಇನ್ನೂ ಹೆಚ್ಚಿನ ಕಾಲಾವಕಾಶದ ಅವಶ್ಯಕತೆ ಇದೆ. ಆದುದರಿಂದ, ಮಾ.20 ಹಾಗೂ 21ರಂದು ನಡೆಸಬೇಕಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News