ಚಳ್ಳಕೆರೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸಿಬಿ ವಶಕ್ಕೆ

Update: 2021-03-13 05:40 GMT

ಚಿತ್ರದುರ್ಗ : ಪಿಡಿಒ ಒಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಚಳ್ಳಕೆರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ   ಶ್ರೀಧರ್ ಐ ಬಾರಿಕೇರ್ ಎಂಬಾತನನ್ನು ಎಸಿಬಿ ಅಧಿಕಾರಿಗಳು ಶುಕ್ರವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಬೆಳಗೆರೆ ಪಿಡಿಒ ಗುಂಡಪ್ಪ ಅವರಿಂದ ಕಾರ್ಯಯೋಜಿತ ಮಂಜೂರಾತಿಗಾಗಿ ತಾಲೂಕು ಪಂಚಾಯತ್ ಬಳಿ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿ ಶ್ರೀಧರ್ ನನ್ನು ವಶಕ್ಕೆ ಪಡೆದಿದ್ದಾರೆ.

ಈತನಿಂದ ದಸ್ತಗಿರಿ ಮಾಡಿದ ಲಂಚದ ಹಣ ಮತ್ತು ಬೆಳಗೆರೆ ಗ್ರಾಮ ಪಂಚಾಯತ್ 14ನೇ ಹಣಕಾಸು ಉಳಿಕೆ, ಬಡ್ಡಿ ಮೊತ್ತ 7,71,292 ರೂ., ಕ್ರಿಯಾಯೋಜನೆಗೆ ಸಂಬಂಧಿಸಿದ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆಯೂ ಶ್ರೀಧರ್‌ ವಿರುದ್ಧ ಹಲವು ದೂರುಗಳು ಕೇಳಿ ಬಂದಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಸಿಬಿ ಎಸ್ಪಿ  ಜಯಪ್ರಕಾಶ  ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ  ಬಸವರಾಜ್  ಮಗದುಮ್,  ಪಿಐಗಳಾದ ಪ್ರವೀಣ್ ಕುಮಾರ್, ಆಂಜನೇಯ ಡಿ.ಎಸ್.ಹರೀಶ ಮಾರುತಿ, ಯತಿರಾಜ್ ಓಬಣ್ಣ, ಫಕ್ರುದ್ದಿನ್ ಪಾಯಾಜ್, ಪ್ರಭಾಕರ್,  ಶ್ರೀಪತಿ ಮತ್ತಿತರರಿದ್ದರು.

ಶ್ರೀಧರ್ ಐ ಬಾರಿಕೇರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News