ನಾಡಗೀತೆ ಹಾಡುವ ಕಾಲಾವಧಿ ಕುರಿತು ತಜ್ಞರ ಸಭೆ: ಅರವಿಂದ ಲಿಂಬಾವಳಿ

Update: 2021-03-15 18:34 GMT

ಬೆಂಗಳೂರು, ಮಾ.15: ನಾಡಗೀತೆ ಹಾಡುವ ಕಾಲಾವಧಿಯನ್ನು ನಿಗದಿಪಡಿಸುವ ಸಂಬಂಧ ತಜ್ಞರ ಸಭೆ ಕರೆಯುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಆಶ್ವಾಸನೆ ನೀಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.

2018ರಲ್ಲಿ ಸಾಹಿತಿಗಳು, ಶಿಕ್ಷಣ ತಜ್ಞರು, ಹಿರಿಯ ಚಿಂತಕರನ್ನು ಒಳಗೊಂಡ ಸಭೆಯನ್ನು ನಡೆಸಿ, ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಹಾಡುವ ಅವಧಿಯು ಗರಿಷ್ಠ 2 ನಿಮಿಷ 30 ಸೆಕೆಂಡುಗಳ ಒಳಗೆ ಇರಬೇಕೆಂದು ನಿರ್ಣಯವನ್ನು ಕೈಗೊಂಡಿತ್ತು.

ಈ ನಿರ್ಣಯವನ್ನು ಸರಕಾರಕ್ಕೆ 2018ರ ನ.15ರಂದು ಸಲ್ಲಿಸಿ, ಸೂಕ್ತ ಆದೇಶವನ್ನು ಹೊರಡಿಸಬೇಕೆಂದು ಮನವಿ ಮಾಡಲಾಗಿತ್ತು ಹಾಗೂ ಸದರಿ ವಿಷಯವಾಗಿ ಸರಕಾರಕ್ಕೆ ಆಗಾಗ ಒತ್ತಾಯಿಸಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News