ಲಂಚ ಪಡೆಯುತ್ತಿದ್ದ ಆರೋಪ: ಡಿಡಿಪಿಐ ಕಚೇರಿ ಪತ್ರಾಂಕಿತ ಸಹಾಯಕ ಎಸಿಬಿ ಬಲೆಗೆ

Update: 2021-03-16 17:30 GMT

ಮೈಸೂರು,ಮಾ.16: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಪತ್ರಾಂಕಿತ ಸಹಾಯಕನೋರ್ವ ಲಂಚ ಸ್ವೀಕರಿಸುವ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆ ಬಿದ್ದಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಪತ್ರಾಂಕಿತ ಸಹಾಯಕ ರಮೇಶ್ ಎಚ್.ವಿ. ಎಂಬವರು ಎಸಿಬಿ ಬಲೆಗೆ ಸಿಲುಕಿ ಬಂಧನಕ್ಕೊಳಗಾದವರು. ಇವರು ಮೈಸೂರು ತಾಲೂಕು ಮಾದಾಪುರ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಪ್ರಸನ್ನ ಕುಮಾರ್ ಅವರ ಸೇವಾ ಜ್ಯೇಷ್ಠತಾ ಬಡ್ತಿಗೆ 5 ಸಾವರಿ ರೂ ಹಣ ನೀಡುವಂತೆ ಒತ್ತಾಯ ಮಾಡಿದ್ದರು ಎನ್ನಲಾಗಿದೆ.

ದೈಹಿಕ ಶಿಕ್ಷಕ ಪ್ರಸನ್ನ ಕುಮಾರ್ 3 ಸಾವಿರ ರೂ. ನೀಡಿದ್ದು, ಉಳಿದ 2 ಸಾವಿರ ರೂ ನೀಡಬೇಕಾದರೆ ಮಂಗಳವಾರ ಸಂಜೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದು ಬಂಧಿಸಿದ್ದಾರೆ.

ಎಸಿಬಿ ಎಸ್ಪಿ ಅರಣಾಂಕ್ಷು ಗಿರಿ ಅವರ ಸೂಚನೆ ಮೇರೆಗೆ ಡಿವೈಎಸ್ಪಿ ಪರಶುರಾಮಪ್ಪ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಅಧಿಕಾರಿಗಳಾದ ಕರೀಮ್ ರಾವತರ್, ಕೆ.ನಿರಂಜನ್, ಸಿಬ್ಬಂದಿಗಳಾದ ಗುರುಪ್ರಸಾದ್, ಪಾಪಣ್ಣ, ಯೋಗೀಶ್, ಚೇತನ್ ಪುಷ್ಪಲತ, ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News